ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದಿಂದ ಆರೋಗ್ಯ ದಿನಾಚರಣೆ

ಮೈಸೂರು, 27 ಏಪ್ರಿಲ್ 2022 (www.justkannada.in): ನಗರದ ಜೆಎಸ್ ಎಸ್ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ  ಮೆಡಿಸಿನ್ ವಿಭಾಗದಿಂದ 75ನೇ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು.

ಆರೋಗ್ಯ ದಿನದ ಅಂಗವಾಗಿ ‘ಎಲ್ಲರಿಗೂ ಆರೋಗ್ಯ’ ವಿಷಯದಡಿ ಕಾಲೇಜಿನ ಸಿಬ್ಬಂದಿಗೆ ನಿಯಮಿತ ಆರೋಗ್ಯ ತಪಾಸಣೆಗಳನ್ನು ಉತ್ತೇಜಿಸಲು ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಪಾಲ್ಗೊಂಡಿದ್ದ ಎಲ್ಲರಿಗೂ ಎತ್ತರ, ತೂಕ, ಸೊಂಟದಿಂದ ಹಿಪ್ ಅನುಪಾತ, ರಕ್ತದೊತ್ತಡ, ಹಿಮೋಗ್ಲೋಬಿನ್, ರಕ್ತದ ಸಕ್ಕರೆ ಮತ್ತು ಇಸಿಜಿ ಪರೀಕ್ಷೆ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೆಎಸ್‌ಎಸ್ ಎಎಚ್‌ಇಆರ್‌ನ ರಿಜಿಸ್ಟ್ರಾರ್ ಡಾ.ಬಿ.ಮಂಜುನಾಥ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ನಿಯಮಿತ ಆರೋಗ್ಯ ತಪಾಸಣೆಯ ಪ್ರಾಮುಖ್ಯತೆ ಕುರಿತು ತಿಳಿಸಿದರು. ಆರೋಗ್ಯಕರ ಸಮುದಾಯವನ್ನು ನಿರ್ಮಿಸಲು ಎಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಚ್.ಬಸವನಗೌಡಪ್ಪ ಆಡಳಿತಾಧಿಕಾರಿ ಎಸ್.ಆರ್.ಸತೀಶ್ ಚಂದ್ರ, ಉಪ ಪ್ರಿನ್ಸಿಪಾಲರಾದ (ಪ್ರಿ-ಕ್ಲಿನಿಕಲ್) ಡಾ ಸುಮಾ ಎಂ.ಎನ್, ಡಾ ಪ್ರವೀಣ್ ಕುಲಕರ್ಣಿ, ಜೆಎಸ್‌ಎಸ್ ಆಸ್ಪತ್ರೆಯ ಉಪನಿರ್ದೇಶಕ ಡಾ.ಜಿ.ವಿ.ಮಂಜುನಾಥ್, ವಿಧಿವಿಜ್ಞಾನ ಮೆಡಿಸಿನ ವಿಭಾಗದ ಮುಖ್ಯಸ್ಥ ಡಾ.ಚಂದ್ರಕಾಂತ್, ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಸುನೀಲ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಡಾ ಶ್ವೇತಾಶ್ರೀ ಇತರರು ಉಪಸ್ಥಿತರಿದ್ದರು.