ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಶರಣು

ಶಿವಮೊಗ್ಗ,ಜನವರಿ,8,2026 (www.justkannada.in):  ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್ಸ್ ಟೇಬಲ್ ನೇಣು ಬಿಗಿದುಕೊಂಡು ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಪಶ್ಚಿಮ ಸಂಚಾರಿ ಠಾಣೆಯಲ್ಲಿ  ಈ ಘಟನೆ ನಡೆದಿದೆ. ಹೆಡ್ ಕಾನ್ಸ್ ಟೇಬಲ್  ಮೊಹಮ್ಮದ್ ಝಕ್ರಿಯ(55) ಆತ್ಮಹತ್ಯೆಗೆ ಶರಣಾದವರು.  ಕೆಲ ದಿನಗಳಿಂದ ರಜೆಯಲ್ಲಿದ್ದ ಹೆಡ್ ಕಾನ್ಸ್ ಟೇಬಲ್  ಮೊಹಮ್ಮದ್ ಕಳೆದ 3 ದಿನಗಳ ಹಿಂದಷ್ಟೇ ಡ್ಯೂಟಿಗೆ ಹಾಜರಾಗಿದ್ದರು.  ನಿನ್ನೆ ರಾತ್ರಿ ಬಸ್ ನಿಲ್ದಾಣದ  ಬಳಿ ಡ್ಯೂಟಿ ಮುಗಿಸಿ ವಾಪಸ್ ಪೊಲೀಸ್ ಠಾಣೆಗೆ  ವಾಪಸ್ ಆಗಿದ್ದರು.

ಈ ಮಧ್ಯೆ ರಾತ್ರಿಯೇ ಮೊಹಮ್ಮದ್ ಝಕ್ರಿಯ ಠಾಣೆಯಲ್ಲಿ ನೇಣಿಗೆ ಶರಣಾಗಿದ್ದರೆ  ಸಂಚಾರಿ ಠಾಣೆ ಹಿಂಬದಿಯ ಸೆಲ್ ಗಳಲ್ಲಿರುವ ಜಾಗದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words: Head constable, commits, suicide, police station