ಬೆಂಗಳೂರು,ಜನವರಿ,16,2026 (www.justkannada.in): ಹೆಚ್ ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರಬೇಕು ಅನ್ನೋದು ಜನರ ಭಾವನೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಲ್ ಕುಮಾರಸ್ವಾಮಿ ತಿಳಿಸಿದರು.
ಇಂದು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಜನರು ಬೇಸತ್ತು ಹೋಗಿದ್ದಾರೆ ಜನರು ಕುಮಾರಸ್ವಾಮಿ ಆಡಳಿತವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆ ರೀತಿಯ ಆಡಳಿತವನ್ನ ಅಲ್ಪಾವಧಿಯಲ್ಲಿ ಕೊಟ್ಟರು. ಜೊತೆಗೆ ಮಿತ್ರ ಪಕ್ಷ ಬಿಜೆಪಿ ನಾಯಕರು ಬಯಸುತ್ತಿದ್ದಾರೆ. ಹೆಚ್ ಡಿಕೆಗೆ ಪ್ರಧಾನಿ ಮೋದಿ ಗೌರವಯುತ ಸ್ಥಾನ ನೀಡಿದ್ದಾರೆ. ಹೆಚ್ ಡಿಕೆಗೆ ದೇಶವನ್ನು ಕಟ್ಟುವ ಕೆಲಸದ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೈತ್ರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಈ ಬಗ್ಗೆ ಮೋದಿ, ಹೆಚ್ ಡಿಕೆ, ಅಮಿತ್ ಶಾ, ಹೆಚ್ ಡಿ ದೇವೇಗೌಡರು ನಿರ್ಣಯ ಮಾಡುತ್ತಾರೆ. ಒಟ್ಟಾಗಿ ಹೋಗಬೇಕಾ? ಇಲ್ಲವಾ? ದೆಹಲಿಯಲ್ಲಿ ತೀರ್ಮಾನ ಆಗುತ್ತೆ. ಸ್ಥಳೀಯ ಮಟ್ಟದಲ್ಲಿ ಆಕಾಂಕ್ಷಿಗಳು ಹೆಚ್ಚು ಹೀಗಾಗಿ ಮೈತ್ರಿ ಬಗ್ಗೆ ದೆಹಲಿಯಲ್ಲಿ ತೀರ್ಮಾನಿಸುತ್ತಾರೆ ಎಂದರು.
Key words: HDK, state politics, JDS, Nikhil Kumaraswamy







