Sunday, September 20, 2026

BDA Apartments

ಕ್ಲೀನ್ ಸ್ವಾಮಿ ಎಂದು ಟೀಕಿಸಿದ ಡಿಕೆ ಶಿವಕುಮಾರ್ ಗೆ ಹೆಚ್.ಡಿಕೆ ಸವಾಲು BDA JK_Adv BDA...
Home Front Page ಕ್ಲೀನ್ ಸ್ವಾಮಿ ಎಂದು ಟೀಕಿಸಿದ ಡಿಕೆ ಶಿವಕುಮಾರ್ ಗೆ ಹೆಚ್.ಡಿಕೆ ಸವಾಲು

ಕ್ಲೀನ್ ಸ್ವಾಮಿ ಎಂದು ಟೀಕಿಸಿದ ಡಿಕೆ ಶಿವಕುಮಾರ್ ಗೆ ಹೆಚ್.ಡಿಕೆ ಸವಾಲು

ಬೆಂಗಳೂರು,ಆಗಸ್ಟ್,9,2024 (www.justkannada.in):  ಕುಮಾರಸ್ವಾಮಿ ಬಹಳ ಕ್ಲೀನ್ ಸ್ವಾಮಿಯಂತೆ. ಅವರ ವಿರುದ್ಧ ಸುಮಾರು 50 ಡಿನೋಟಿಫಿಕೇಶನ್ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವನ್ನು ಹೊರಗೆ ತರುತ್ತೇನೆ ಎಂದು ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಕೇಂದ್ರ ಸಚಿವ ಹೆಚ್.ಡಿಕೆ ಸವಾಲು ಹಾಕಿದ್ದಾರೆ.

ಈ ಸಂಬಂಧ ಡಿಕೆ ಶಿವಕುಮಾರ್ ವಿರುದ್ದ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಹೆಚ್.ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಮನುಷ್ಯನಾ ಅವನು.  ಮಾಡೋದಾದ್ರೆ ಗಂಡಸ್ತನದ ರಾಜಕೀಯ ಮಾಡಬೇಕು ಎಂದು ಸವಾಲೆಸೆದರು.  ನನ್ನ ಕುಟುಂಬ ಮತ್ತು ನನ್ನ ಬಗ್ಗೆ ಚರ್ಚೆ ಮಾಡ್ತಾನಾ ಅವನು . ನಪುಂಸಕರು ಮಾಡೋ ಕೆಲಸ ಮಾಡ್ತಾ ಕೂತಿದ್ದಾನೆ ಎಂದು ತೀವ್ರ ಕಿಡಿಕಾರಿದರು.

‘ಯಾವ ಪ್ರಕರಣ ನನ್ನ ಮೇಲಿದೆ. ಯಾರು ನನ್ನ ಮೇಲೆ ಕೇಸ್ ಹಾಕಿದ್ದಾರೆ? ಸುಮ್ನೆ ಮಾತನಾಡುವುದಲ್ಲ. ಇದ್ದರೆ ಬಹಿರಂಗವಾಗಿ ಬರಲಿ. ಕೊಳ್ಳೆ ಹೊಡೆದು ಅವರು ಈಗ ಮಾತನಾಡುತ್ತಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಎಂದು ಹೆಚ್.ಡಿಕೆ ಹರಿಹಾಯ್ದರು.

Key words: HDK, DK Sivakumar, criticized, clean Swami