ಹೆಚ್.ಡಿಕೆ ಸಿಎಂ ಆಗಿದ್ದ ವೇಳೆ ಹೋಟೆಲ್ ನಲ್ಲಿ ರಾಸಲೀಲೆ ಆಡಿಕೊಂಡಿದ್ರು- ಸಿ.ಪಿ ಯೋಗೇಶ್ವರ್ ಆರೋಪ.

ರಾಮನಗರ,ಮಾರ್ಚ್,14,2022(www.justkannada.in): ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದ ವೇಳೆ ರಾಸಲೀಲೆ ಆಡಿಕೊಂಡಿದ್ದರು. ಸಿಎಂ ಆದಾಗ  ತಾಲ್ಲೂಕಿಗೆ ಬರಲಿಲ್ಲ. ಈಗ ಜನರ ಬಳಿ ಬರುತ್ತಿದ್ದಾರೆ ಎಂದು ಮಾಜಿ ಸಚಿವ ಸಿಪಿ ಯೋಗೇಶ್ವರ್ ಆರೋಪಿಸಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿ.ಪಿ ಯೋಗೇಶ್ವರ್, ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹೋಟೆಲ್ ನಲ್ಲಿ ರಾಸಲೀಲೆ ಆಡಿಕೊಂಡಿದ್ದರು. ಹೆಚ್.ಡಿಕೆ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೇನೆ. ಹೆಚ್.ಡಿಕೆ ಬಗ್ಗೆ ಇಡೀ  ರಾಜ್ಯದ ಜನರಿಗೆ ಗೊತ್ತಿಲ್ಲ.  ನೇರವಾಗಿ ನಾನು ದಾಖಲೆ ಇಟ್ಟಕೊಂಡು ಮಾತನಾಡುತ್ತೇನೆ.  ರಾಸಲೀಲೆ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ, ಅವರು ಹೇಳಿಲ್ಲ ಅಂದ್ರೆ ನಾನೇ ಹೇಳ್ತೀನಿ ಎಂದರು.

ನನ್ನಿಂದ ಯಾಕಪ್ಪ ಎಚ್​ಡಿಕೆ ಆಣಿಮುತ್ತುಗಳನ್ನು ಕೇಳ್ತೀರಾ? ನೇರಾ-ನೇರಾ ನನ್ನ ಮುಂದೆ ಕೂರಿಸಿ. ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳನ್ನು ಬಹಿರಂಗವಾಗಿ ಮಾತಾಡೋಣ. 14 ತಿಂಗಳು‌ ಸಿಎಂ ಆಗಿದ್ದ ವೇಳೆ ಚನ್ನಪಟ್ಟಣಕ್ಕೆ ಎಚ್​ಡಿಕೆ ಬರ್ತಿರಲಿಲ್ಲ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ರಾಸಲೀಲೆ ಆಡಿಕೊಂಡಿದ್ರು. ಇದೀಗ ಚನ್ನಪಟ್ಟಣ ತಾಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು ನಾಟಕ ಮಾಡ್ತಿದ್ದಾರೆ. ಎಚ್​ಡಿಕೆ ಬಹಿರಂಗ ಚರ್ಚೆಗೆ ಬರಲಿ, ನಾನೂ ಸಿದ್ಧನಿದ್ದೇನೆ. ನನ್ನ ಬಗ್ಗೆ ಏಕವಚನದಲ್ಲಿ ಮಾತಾಡಿದ್ರೆ, ನಾನೂ ಕೂಡ ಏಕವಚನದಲ್ಲೇ ಮಾತಾಡ್ತೀನಿ ಎಂದು  ಹರಿಹಾಯ್ದರು.

Key words: HDK-CM-hotel-CP Yogeshwar