Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಪ್ರಜ್ವಲ್ ರೇವಣ್ಣ ವಿರುದ್ದವೇ ಹೆಚ್.ಡಿಕೆ ಕೇಸ್ ಹಾಕಿಸಿದ್ದಾರೆ- ಡಿಕೆ ಶಿವಕುಮಾರ್ ಹೊಸ ಬಾಂಬ್

ಪ್ರಜ್ವಲ್ ರೇವಣ್ಣ ವಿರುದ್ದವೇ ಹೆಚ್.ಡಿಕೆ ಕೇಸ್ ಹಾಕಿಸಿದ್ದಾರೆ- ಡಿಕೆ ಶಿವಕುಮಾರ್ ಹೊಸ ಬಾಂಬ್

ಮೈಸೂರು,ಆಗಸ್ಟ್,9,2024 (www.justkannada.in):  ಮಗನಿಗೆ ತೊಂದರೆ ಆಗುತ್ತೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ವಿರುದ್ದವೇ ಕೇಸ್ ಹಾಕಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವ ಕುಮಾರ್ ಹೊಸ ಬಾಂಬ್ ಸಿಡಿಸಿದರು.

ಮೈಸೂರಿನಲ್ಲಿ ನಡೆದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್. ಹೆಚ್.ಡಿ  ಕುಮಾರಸ್ವಾಮಿ ಯಾರನ್ನೂ ಬಿಡಲ್ಲ ಪ್ರಜ್ವಲ್ ರೇವಣ್ಣ ವಿರುದ್ದವೇ ಕೇಸ್ ಹಾಕಿಸಿದ್ದಾರೆ.  ಮಗನಿಗೆ ತೊಂದರೆ ಆಗುತ್ತೆ ಎಂದು ಮತ್ತೊಬ್ಬನ ಮೇಲೆ ಕೇಸ್ ಹಾಕಿಸಿದ್ದಾರೆ ಎಂದು ಕಿಡಿಕಾರಿದರು.

ಕುಟುಂಬದವರ ಅನುಕೂಲಕ್ಕಾಗಿ ಬೇರೆ ನಾಯಕರನ್ನು ಓಡಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಯಾರನ್ನೂ ಬೆಳೆಯಲು ಬಿಡುವ ಜಾಯಮಾನ ಅವರದಲ್ಲ. ಕುಮಾರಸ್ವಾಮಿ ವಿರುದ್ದ 50 ಡಿನೋಟಿಫಿಷನ್ ಕೇಸ್ ಗಳಿವೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.

Key words: HDK, case, against, Prajwal Revanna- DK Sivakumar