Tuesday, September 15, 2026

BDA Apartments

Home Front Page ಹೆಚ್.ಡಿ ದೇವೇಗೌಡರು ಬದುಕಿರುವಾಗಲೇ ಹೆಚ್.ಡಿಕೆ ಸಿಎಂ ಆಗಬೇಕು- ಮಾಜಿ ಸಚಿವ ಹೆಚ್.ಡಿ ರೇವಣ್ಣ.

ಹೆಚ್.ಡಿ ದೇವೇಗೌಡರು ಬದುಕಿರುವಾಗಲೇ ಹೆಚ್.ಡಿಕೆ ಸಿಎಂ ಆಗಬೇಕು- ಮಾಜಿ ಸಚಿವ ಹೆಚ್.ಡಿ ರೇವಣ್ಣ.

ಹಾಸನ,ಜನವರಿ,20,2023(www.justkannada.in): ಜೆಡಿಎಸ್ ಸ್ವಾತಂತ್ರವಾಗಿ ಅಧಿಕಾರಕ್ಕೆ ಬರಬೇಕು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಬದುಕಿರುವಾಗಲೇ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಬೇಕು ಎಂದು ಮಾಜಿ ಸಚಿವ ಶಾಸಕ ಹೆಚ್.ಡಿ ರೇವಣ್ಣ ಹೇಳಿದರು.

ಹಾಸನದಲ್ಲಿ ಇಂದು ಮಾತನಾಡಿದ ಹೆಚ್.ಡಿ ರೇವಣ್ಣ, ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ.  ಅಧಿಕಾರಕ್ಕೆ ಬಂದರೆ ಶ್ತ್ರೀ ಶಕ್ತಿ ಸಾಲಮನ್ನಾ ಮಾಡುತ್ತೇವೆ.  ಕುಮಾರಣ್ಣ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ . ಹಾಸನದಲ್ಲಿ 7 ಕ್ಷೇತ್ರಗಳಲ್ಲೂ ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದರು.

ದೇವೇಗೌಡರು ಬದುಕಿರುವಾಗಲೇ ಹೆಚ್.ಡಿಕೆ ಸಿಎಂ ಆಗಬೇಕು. ಸಿಎಂ ಮಾಡಲು ಕಾರ್ಯಕರ್ತರು ದುಡಿಯಬೇಕು ಎಂದರು.

ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಟೀಕಿಸಿದ ಹೆಚ್.ಡಿ ರೇವಣ್ಣ, ಕಾಂಗ್ರೆಸ್ ನವರ ಧ್ವನಿ ಹೈಕಮಾಂಡ್ ಗೆ ತಲುಪಿಲ್ಲ. ಇನ್ನು ಜನರಿಗೆ ತಲುಪುತ್ತಾ..? ಎಂದು ಲೇವಡಿ ಮಾಡಿದರು.

Key words: HDK -become -CM – HD Deve Gowda – still- alive – Former minister- HD Revanna.