ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಎಂದಿದ್ದ ಶಾಸಕ ಶಿವಲಿಂಗೇ‍ಗೌಡರಿಗೆ ತಿರುಗೇಟು ಕೊಟ್ಟ ಹೆಚ್.ಡಿ ರೇವಣ್ಣ.

ಹಾಸನ,ಮಾರ್ಚ್,6,2023(www.justkannada.in): ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ  ಮಾಜಿ ಸಿಎಂ ಸಿದ್ದರಾಮಯ್ಯ ಕೊಡುಗೆ ನೀಡಿದ್ದಾರೆ ಎಂದಿದ್ದ ಶಾಸಕ ಶಿವಲಿಂಗೇ‍ಗೌಡರಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿರುಗೇಟು ನೀಡಿದ್ದಾರೆ.

ಅರಸೀಕೆರೆಗೆ ಕುಡಿಯೊ ನೀರು ಯೋಜನೆ ಕೊಟ್ಟಿದ್ದು ನಾವು. ನಾವು ಶಾಸಕರನ್ನಾಗಿ ಮಾಡದೆ ಇದ್ದರೇ ಅವರು ಹೇಗೆ ಅಭಿವೃದ್ಧಿ ಮಾಡುತ್ತಿದ್ದರು. ಇವರು ಶಾಸಕರಾಗೊ ಮೊದಲೆ ನಾವು ಸಾಕಷ್ಟು ಕೆಲಸ ಆ ಕ್ಷೇತ್ರಕ್ಕೆ ಮಾಡಿದ್ದೇವೆ ಎಂದು ಶಿವಲಿಂಗೇಗೌಡರ ವಿರುದ್ಧ ಹೆಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದರು.

ಈ ಕುರಿತು ಇಂದು ಮಾತನಾಡಿದ ಹೆಚ್.ಡಿ ರೇವಣ್ಣ, ಶಿವಲಿಂಗೇಗೌಡರಿಗೆ ಈ ಪಕ್ಷ 15 ವರ್ಷ ಎಲ್ಲಾ ಸಕಲ ಸವಲತ್ತು ಕೊಟ್ಟಿದೆ. ಈಗ ಪಕ್ಷ ತೊರೆಯುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರಿಗೆ ಅನುಕೂಲ ಆಗಲಿ ಎಂದು ಎಲ್ಲ ತ್ಯಾಗ ಮಾಡಿದೆವು. ಅವರು ಇಲ್ಲೇ ಇರುತ್ತೇವೆ ಎಂದು ಹೇಳಿದರು. ಶಿವಲಿಂಗೇಗೌಡರಿಗೆ ರಾಗಿ ಕಳ್ಳ ಅಂತಾ ಯಾರೋ ಟೀಕೆ ಮಾಡಿದರು. ಆಗ ಧರ್ಮಸ್ಥಳಕ್ಕೆ ಹೋಗಿ ಅಣೆ ಮಾಡಿದರು.  ಹಾಗೆಯೇ ಕುಮಾರಸ್ವಾಮಿ ಮುಂದೆಯೇ  ಜೆಡಿಎಸ್ ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದರು. ಹಾಗೆ ಹೇಳಿಲ್ಲ ಅಂತಾ ಶಿವಲಿಂಗೇಗೌಡರು ಆಣೆ ಮಾಡಲಿ ನೋಡೊಣಾ ಎಂದು ಕಿಡಿಕಾರಿದರು.

Key words: HD Revanna – MLA -Shivalinge Gowda – Siddaramaiah- contribution -development