Friday, September 18, 2026

BDA Apartments

Home Front Page ಷಡ್ಯಂತ್ರ ಮಾಡಿ ಹೆಚ್.ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ- ಶಾಸಕ ಜಿ.ಟಿ ದೇವೇಗೌಡ ಕಿಡಿ.

ಷಡ್ಯಂತ್ರ ಮಾಡಿ ಹೆಚ್.ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ- ಶಾಸಕ ಜಿ.ಟಿ ದೇವೇಗೌಡ ಕಿಡಿ.

ಬೆಂಗಳೂರು,ಮೇ,9,2024 (www.justkannada.in): ಸಂತ್ರಸ್ತ ಮಹಿಳೆಯ  ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ,  ಷಡ್ಯಂತ್ರ ಮಾಡಿ ಹೆಚ್.ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಷಡ್ಯಂತ್ರ ಮಾಡಿ ರೇವಣ್ಣರನ್ನ ಜೈಲಿಗೆ ಕಳುಹಿಸಿದ್ದಾರೆ. ಎಸ್ ಐಟಿ ಸರ್ಕಾರದ ಆದೇಶದಂತೆ ಕೆಲಸ ಮಾಡುತ್ತಿದೆ.  ಈ ಬಗ್ಗೆ ರಾಜ್ಯಪಾಲರಿಗೆ ದೂರು ಕೊಡಲು ನಿರ್ಧಾರ ಮಾಡಿದ್ದೇವೆ.  ಸಭೇ ಬಳಿಕ ಸ್ಪಷ್ಟ ನಿರ್ಧಾರ ಮಾಡುತ್ತೇವೆ ಎಂದರು.ಷಡ್ಯಂತ್ರ ಮಾಡಿ ಹೆಚ್.ಡಿ ರೇವಣ್ಣರನ್ನ ಜೈಲಿಗೆ ಕಳಿಸಿದ್ದಾರೆ gt deve

ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆಯಾಗುವುದಿಲ್ಲ.  ಪ್ರಧಾನಿ ಮೋದಿ ಮೈತ್ರಿ ಪಕ್ಷಗಳನ್ನ ಕೈ ಬಿಡುವುದಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

Key words: HD Revanna, jail,MLA, GT Deve Gowda