ಹೆಚ್.ಡಿ ರೇವಣ್ಣ ಬಂಧನ ರಾಜಕೀಯ ಪಿತೂರಿ- ಮಾಜಿ ಸಚಿವ ಸಾ.ರಾ ಮಹೇಶ್

ಬೆಂಗಳೂರು,ಮೇ,14,2024 (www.justkannada.in): ಸಂತ್ರಸ್ತ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ  ಶಾಸಕ ಹೆಚ್.ಡಿ ರೇವಣ್ಣ ಜಾಮೀನು ಪಡೆದು ಇಂದು ಬಿಡುಗಡೆಯಾಗಿದ್ದು ಈ ಬೆನ್ನಲ್ಲೆ  ಮಾಜಿ ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಶಾಸಕ ಸಾ.ರಾ ಮಹೇಶ್, ಹೆಚ್.ಡಿ ರೇವಣ್ಣ, ಬಂಧನ ರಾಜಕೀಯ ಪಿತೂರಿ. ರೇವಣ್ಣ ವಿರುದ್ದ ಪಿತೂರಿ ಮಾಡಲಾಗಿದೆ. ಪಿತೂರಿ ನಡೆಸಿದ್ದು ಸತ್ಯ ಅನ್ನೋದು ರಾಜ್ಯದಜ ನರಿಗೆ ಗೊತ್ತಿದೆ. ಇದು ನಿಷ್ಟಾವಂತ ಪೊಲೀಸರಿಗೂ ಗೊತ್ತಿದೆ ಎಂದರು.

ಇನ್ನು ಪ್ರಜ್ವಲ್ ರೇವಣ್ಣ ಬಗ್ಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಸಾ.ರಾ ಮಹೇಶ್,  ಪ್ರಜ್ವಲ್ ವಿಚಾರಕ್ಕೆ ನಾನುಪ್ರತಿಕ್ರಿಯಿಸಲ್ಲ ರೇವಣ್ಣ ನಮ್ಮ ಕ್ಷೇತ್ರದ ಅಳಿಯ.  ಬೇರೆಯವರ ಬಗ್ಗೆ ಬೇಡ.  ನನಗೆ ರೇವಣ್ಣ ಮಾತ್ರ ಸಂಬಂಧ ಪಟ್ಟವರೇ ಅವರ ಬಗ್ಗೆ ಮಾತ್ರ ಕೇಳಿ ಬೇರೆಯವರ ಬಗ್ಗೆ ಕೇಳಬೇಡಿ. ಪ್ರಜ್ವಲ್ ಬಗ್ಗೆ ಮಾತನಾಡಲ್ಲ ಎಂದರು.

Key words: HD Revanna, arrest,  political, Sara Mahesh