Sunday, August 9, 2026

BDA Apartments

Home Front Page ಹೆಚ್.ಡಿಕೆ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ-ಸಚಿವ ಸಿ.ಪಿ ಯೋಗೇಶ್ವರ್ ವಾಗ್ದಾಳಿ…

ಹೆಚ್.ಡಿಕೆ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ-ಸಚಿವ ಸಿ.ಪಿ ಯೋಗೇಶ್ವರ್ ವಾಗ್ದಾಳಿ…

ಚನ್ನಪಟ್ಟಣ,ಫೆಬ್ರವರಿ,26,2021(www.justkannada.in):  ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಜನರನ್ನ ಮನೆಗೆ ಸೇರಿಸುತ್ತಿರಲಿಲ್ಲ ಎಂದು ಸಚಿವ ಸಿ,ಪಿ ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್, ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜನರ ಕೈಗೆ ಸಿಗುತ್ತಿರಲಿಲ್ಲ. ಆದರೆ ಈಗ ಚನ್ನಪಟ್ಟಣಕ್ಕೆ ಬಂದಿದ್ದಾರೆ. ಜನರ ಜತೆ ನಮ್ಮ ದುರಹಂಕಾರ ನಡೆಯಲ್ಲ. ಅಭಿವೃದ್ಧಿಗಷ್ಟೆ ಮತ ಹಾಕ್ತಾರೆ ಎಂದು ಗೊತ್ತಾಗಿದೆ ಎಂದು ತಿಳಿಸಿದರು.HD kumaraswamy- CM- people –Minister- CP Yogeshwar

ಏಪ್ರಿಲ್ ನಂತರ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಚನ್ನಪಟ್ಟಣದ ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತೇನೆ. ಚನ್ನಪಟ್ಟಣ ನನಗೆ ರಾಜಕೀಯ ಜನ್ಮ ಕೊಟ್ಟ ತಾಲ್ಲೂಕು. ಮತಹಾಕದಿದ್ರೂ ಸಚಿವನಾಗುವ ಶಕ್ತಿ ನೀಡಿದ್ದೀರಿ ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.

Key words:  HD kumaraswamy- CM- people –Minister- CP Yogeshwar