ನಮ್ಮ ಪಕ್ಷದ ಸಿಎಂ ನಿರ್ಧರಿಸೋಕೆ ಹೆಚ್.ಡಿ ಕುಮಾರಸ್ವಾಮಿ ಯಾರು..? ಸಚಿವ ಬಿಸಿ ಪಾಟೀಲ್ ಕಿಡಿ

ಕಾರವಾರ,ಫೆಬ್ರವರಿ,9,2023(www.justkannada.in): ಈ ದೇಶದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಹೆಚ್​.​ಡಿ. ಕುಮಾರಸ್ವಾಮಿಗೆ ಯಾವ ನೈತಿಕತೆಯಿದೆ. ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಖಂಡಿಸುತ್ತೇನೆ  ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಬಿಸಿ ಪಾಟೀಲ್,  ಸಿಎಂ ಆಗಲು 25 ವರ್ಷ ಆಗಿರಬೇಕು ಮತ್ತು ತಲೆ ಸರಿಯಿರಬೇಕು. ನಮ್ಮ ಪಕ್ಷದ ಸಿಎಂ ನಿರ್ಧರಿಸೋಕೆ ಮಾಜಿ ಸಿಎಂ ಕುಮಾರಸ್ವಾಮಿ ಯಾರು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಸಿಡಿ ಬಿಡುವುದಾಗಿ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್,  ಹೆಚ್​.ಡಿ.ಕುಮಾರಸ್ವಾಮಿ ಬಗ್ಗೆ ಹೇಳೋಕೆ ಹೋದ್ರೆ ಬೇಕಾದಷ್ಟು ಇದೆ. ತಾಜ್​ ವೆಸ್ಟೆಂಡ್​​ ಹೋಟೆಲ್ ಯಾತ್ರೆ ನೋಡಿದ್ರೆ ಬೇಕಾದಷ್ಟು ಆಗುತ್ತೆ. ತನ್ನ ಚಟ ಬಿಟ್ಟು ಗಾಂಧೀಜಿ ಬೇರೆಯವರಿಗೆ ಹೇಳಿದರಂತೆ, ಅದೇ ರೀತಿ ಮೊದಲು ಇವರಿಗೆ ಇರುವ ಚಟ ಬಿಡಲಿ ಎಂದು ವಾಗ್ದಾಳಿ ನಡೆಸಿದರು.

Key words: HD Kumaraswamy -CM -our party-Minister-BC Patil