ಹೆಚ್.ಡಿಕೆ ಸಿಎಂ ಆಗಿದ್ದಾಗಲೂ ರಸ್ತೆಗುಂಡಿಗಳಿದ್ದವು: ಅವರ ಆರೋಪದಲ್ಲಿ ಹುರುಳಿಲ್ಲ- ಸಿಎಂ ಬೊಮ್ಮಾಯಿ ತಿರುಗೇಟು.

ಯಾದಗಿರಿ,ಅಕ್ಟೋಬರ್,19,2022(www.justkannada.in):  ಬೆಂಗಳೂರು ರಸ್ತೆಗುಂಡಿಗಳ ಬಗ್ಗೆ ಟ್ವೀಟ್ ಮಾಡಿ ಸರ್ಕಾರಕ್ಕೆ ಚಾಟಿ ಬೀಸಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಯಾದಗಿರಿಯಲ್ಲಿ ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ರಸ್ತೆಯಲ್ಲಿ ಗುಂಡಿಗಳಿದ್ದವು.  ಹೀಗಾಗಿ ಹೆಚ್.ಡಿಕೆ  ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬೆಂಗಳೂರಿನ ರಸ್ತೆಗುಂಡಿಗಳ ಬಗ್ಗೆ ತನಿಖೆಗೆ ಸೂಚನೆ ನೀಡಲಾಗಿದೆ. ಕೂಡಲೇ ರಸ್ತೆ ಗುಂಡಿಗಳನ್ನ ಮುಚ್ಚಿಸಲು ಹೇಳಿದ್ದೇನೆ ಎಂದರು.

ಹಾಗೆಯೇ ಕಾಂಗ್ರೆಸ್ ವಿರುದ್ಧ ಗುಡುಗಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನವರು ಬರೀ ಮಾತಾಡ್ತಾರೆ. ನಾವು ಕೆಲಸ ಮಾಡಿ ತೋರಿಸುತ್ತೇವೆ . ಕಾಂಗ್ರೆಸ್  ಅವಧಿಯಲ್ಲಿ ಆಗಿರುವ ಎಲ್ಲಾ ಹಗರಣಗಳ ಬಗ್ಗೆ ತನಿಖೆ ಮಾಡುತ್ತೇವೆ. ಶಿಕ್ಷಕರ ನೇಮಕಾತಿ ತನಿಖೆ ನಡೆಯುತ್ತಿದೆ.  ನಾವು ರಾಜ್ಯದ ಎಲ್ಲಾ ಕಡೆ ಜನಸಂಕಲ್ಪಯಾತ್ರೆ ಮಾಡುತ್ತಿದ್ಧೇವೆ. ಈ ಜನಸಂಕಲ್ಪಯಾತ್ರೆ ವಿಜಯಯಾತ್ರೆಯಾಗಿ ಬದಲಾಗಲಿದೆ ಎಂದರು.

Key words: HD Kumaraswamy-  Bangalore-pathole- CM-Basavaraj Bommai