ಮೈಸೂರು,ಆಗಸ್ಟ್,7,2025 (www.justkannada.in): ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಜಿ.ವಿ.ಸೀತಾರಾಮ್ ಗಡಿಪಾರಿಗೆ ಆಗ್ರಹಿಸಿ ಇಂದು ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ.
ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ಒಕ್ಕಲಿಗ ಮುಖಂಡರಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಚ್ಚಿ ಬಂದ್ ಗೆ ಸಾಥ್ ನೀಡಿದ್ದಾರೆ. ಮೂವತ್ತು ಸಾವಿರಕ್ಕೂ ಹೆಚ್ಚು ಒಕ್ಕಲಿಗರು ಜಮಾವಣೆಗೊಂಡಿದ್ದು ಹೆಚ್.ಡಿ.ಕೋಟೆ ತಹಶೀಲ್ದಾರ್ ಕಚೇರಿ ಬಳಿ ಜಿ.ವಿ.ಸೀತಾರಾಮ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದ್ ಗೆ ರಾಜ್ಯ ಒಕ್ಕಲಿಗರ ಸಂಘ, ಮೈಸೂರು, ಚಾಮರಾಜನಗರ ಒಕ್ಕಲಿಗರ ಸಂಘ ಸಾಥ್ ನೀಡಿದ್ದು ಮಾಜಿ ಸಂಸದ ಪ್ರತಾಪಸಿಂಹ ಸೇರಿ ಒಕ್ಕಲಿಗ ಮುಖಂಡರು ಪ್ರತಿಭಟನೆ ವೇಳೆ ಉಪಸ್ಥಿತರಿದ್ದರು.
ಕಬಿನಿ ಹಿನ್ನೀರಿನಲ್ಲಿ ಜಿ.ವಿ.ಸೀತಾರಾಮ್ ವಿರುದ್ದ ಭೂ ಕಬಳಿಸಿರುವ ಆರೋಪ ಕೇಳಿ ಬಂದಿತ್ತು. ಅಕ್ರಮ ಭೂ ಒತ್ತುವರಿ ಕುರಿತು ಹೋರಾಟಗಾರ ಪರಮೇಶ್ ಎಂಬುವವರು ಪ್ರಶ್ನಿಸಿದ್ದರು. ಪರಮೇಶ್ ಪ್ರಶ್ನಿಸುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಒಕ್ಕಲಿಗರ ವಿರುದ್ಧ ಕೆಟ್ಟ ಪದಗಳ ಬಳಕೆ ಮಾಡಿ ಅವಮಾನ ಮಾಡಿದ್ದಾರೆ ಎಂಬ ಆರೋಪವಿದೆ.
Key words: HD Kote, saragur, Bandh, protest, Vokkaliga