Wednesday, August 5, 2026

BDA Apartments

Home Front Page ಅನರ್ಹ ಶಾಸಕರ ವಿರುದ್ದ ಕಿಡಿ: ಕೆ.ಆರ್ ಪೇಟೆಗೆ ಹೇಮಾವತಿ ನೀರು, ಸಕ್ಕರೆ ಕಾರ್ಖಾನೆ ಕೊಟ್ಟವರು ಹೆಚ್.ಡಿ...

ಅನರ್ಹ ಶಾಸಕರ ವಿರುದ್ದ ಕಿಡಿ: ಕೆ.ಆರ್ ಪೇಟೆಗೆ ಹೇಮಾವತಿ ನೀರು, ಸಕ್ಕರೆ ಕಾರ್ಖಾನೆ ಕೊಟ್ಟವರು ಹೆಚ್.ಡಿ ದೇವೇಗೌಡರು- ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿಕೆ….

ಮಂಡ್ಯ,ನ,27,2019(www.justkannada.in): ಕೆ.ಆರ್.ಪೇಟೆ ತಾಲ್ಲೂಕಿಗೆ ದೇವೆಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೇಮಾವತಿ ನೀರು, ಸಕ್ಕರೆ ಕಾರ್ಖಾನೆಯನ್ನ ಕೆ‌.ಆರ್.ಪೇಟೆಗೆ ಕೊಟ್ಟವರು ದೇವೆಗೌಡರು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ತಿಳಿಸಿದರು.

ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾಜಿ ಸಚಿವ ಹೆಚ್.ಡಿ ರೇವಣ್ಣ,  ಕೆ.ಆರ್.ಪೇಟೆ ತಾಲ್ಲೂಕಿಗೆ ದೇವೆಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೇಮಾವತಿ ನೀರು, ಸಕ್ಕರೆ ಕಾರ್ಖಾನೆಯನ್ನ ಕೆ‌.ಆರ್.ಪೇಟೆಗೆ ಕೊಟ್ಟವರು ದೇವೆಗೌಡರು.ಕೆ‌.ಆರ್.ಪೇಟೆಯಲ್ಲಿ ಮತ ಕೇಳುತ್ತಿರುವ ಯಡಿಯೂರಪ್ಪಗೆ ಮಾನ ಮರ್ಯಾದೆ ಇಲ್ಲ. ಕೆ.ಆರ್.ಪೇಟೆ ತಾಲ್ಲೂಕಿನವರೇ ಆದರೂ ಏನೂ ಕೆಲಸ ಮಾಡಿಲ್ಲ. ನಮ್ಮತ್ರ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದವರು ಹೇಗೆ ಅಭಿವೃದ್ದಿ ಮಾಡ್ತಾರೆ. ಅಧಿಕಾರಕ್ಕೆ ಬಂದ ಎರಡೇ ದಿನದಲ್ಲಿ ಶಿಕಾರಿಪುರಕ್ಕೆ ಎರಡೂವರೆ ಸಾವಿರ ಕೋಟಿ ಅನುದಾನ ನೀಡ್ತಾರೆ. ಬಾಂಬೆ ಗಿರಾಕಿ ಇದೆಲ್ಲವನ್ನ ಹೇಳಲು ಆಗಲ್ಲವೇ..? ಎಂದು ಕಿಡಿಕಾರಿದರು.

ಕಾವೇರಿ ನೀರಾವರಿ‌ ನಿಗಮದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಏಳುವರೆ ಸಾವಿರ ಕೋಟಿ ಹಣ ತಡೆ ಹಿಡಿದಿದ್ದಾರೆ. ನಾನು ಏನಾದರೂ ಕೆ.ಆರ್.ಪೇಟೆ ಅಭಿವೃದ್ದಿಗೆ ಮುಂದಾದರೆ ಹಸ್ತಕ್ಷೇಪ ಮಾಡ್ತಾರೆ ಅಂತಾನೆ. ನಾರಾಯಣಗೌಡ ಇಲ್ಲಿ ವಸೂಲಿ ಮಾಡಿಕೊಂಡು ಬಾಂಬೆಗೆ ಹೋಗ್ತಾನೆ. ಇವನನ್ನ ಬಾಂಬೆಗೆ ಪರ್ಮನೆಂಟಾಗಿ ಕಳಿಸಿಬಿಡಿ ಎಂದು ಹೆಚ್.ಡಿ ರೇವಣ್ಣ ಲೇವಡಿ ಮಾಡಿದರು.

ಹುಣಸೂರು ಹಳ್ಳಿಹಕ್ಕಿ ಒಳ್ಳೆ ಹಕ್ಕಿ ಆಗಿದ್ರೆ ಎಲ್ಲದರೂ ಒಂದು ಕಡೆ ಇರ್ತಿತ್ತು. ಅಲ್ಲೋಬ್ಬ ಮಹಾಲಕ್ಷ್ಮೀ‌ ಲೇಔಟ್‌ನವನೊಬ್ಬ ಬಿಜೆಪಿಗೆ ಹೋಗಿದ್ದಾನೆ. ಕುಮಾರಣ್ಣ ಇಲ್ಲಂದ್ರೆ ಇವರೆಲ್ಲಾ ಜೈಲಲ್ಲಿರಬೇಕಿತ್ತು. ಸ್ವಾಮೀಜಿಗಳು ತಥಾಸ್ತು ಎನ್ನುವ ಹಾಗೆ ಕುಮಾರಣ್ಣ ತಥಾಸ್ತು ಅಂದಿದ್ದಕ್ಕೆ ಇನ್ನೂ ಇದ್ದಾರೆ. ಈ ಸರ್ಕಾರ ಹೋಗುತ್ತೆ ಅಂತಾ ಹೇಳ್ತಾರೆ. ಜನರ ಶಾಪದಿಂದಲೇ ಈ ಸರ್ಕಾರ ಹೋಗುತ್ತೆ. ವಿಜಯೇಂದ್ರ ಎಲೆಕ್ಷನ್ ಆದ್ಮೇಲೆ ಎಲ್ಲಿರ್ತಾನೆ..? ಅರ್ಥ ಮಾಡಿಕೊಂಡು ಬಿ.ಎಲ್.ದೇವರಾಜ್‌ಗೆ ಮತ ನೀಡಿ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಮನವಿ ಮಾಡಿದರು.

Key words: HD Deve Gowda – Hemavathi Water- Sugar Factory-former Minister- HD Revanna