ಆಕ್ಸಿಜನ್ ಕೊರತೆಯಿಂದ ಯಾರು ಸತ್ತಿಲ್ಲವೆಂಬ ಕೇಂದ್ರದ ಉತ್ತರಕ್ಕೆ ಹೆಚ್.ಸಿ ಮಹದೇವಪ್ಪ, ಶಾಸಕ ಯತೀಂದ್ರ ಸಿದ್ಧರಾಮಯ್ಯ ಆಕ್ರೋಶ.

ಮೈಸೂರು,ಜುಲೈ,21,2021(www.justkannada.in): ಕೊರೋನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಉತ್ತರ ನೀಡಿರುವ ಹಿನ್ನಲೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ, ನ್ಯಾಯಾಲಯ ನೇಮಿಸಿದ ಸಮಿತಿಯೇ ಚಾಮರಾಜನಗರದಲ್ಲಿ 24ಕ್ಕೂ ಹೆಚ್ಚು ಜನರು ಆಕ್ಸಿಜನ್ ಕೊರತೆಯಿಂದ ಅಸುನೀಗಿದ್ದಾರೆ ಎಂದು ವರದಿ ನೀಡಿದೆ. ಮೋದಿ ಸರ್ಕಾರ ಆಕ್ಸಿಜನ್ ಅಭಾವದಿಂದ ಯಾರೂ ಸತ್ತಿಲ್ಲವೆಂದು ಸಂಸತ್ತಿನಲ್ಲಿ ಹೇಳಿಕೆ ಕೊಟ್ಟಿದೆ. ಮೋದಿ ಸರ್ಕಾರದ ನಿರ್ದಯತೆ,  ಭಂಡತನಕ್ಕೆ ಮಿತಿಯಿಲ್ಲದಂತಾಗಿದೆ ಎಂದು ಹರಿಹಾಯ್ದಿದ್ದಾರೆ.

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ನ್ಯಾಯಾಲಯವೇ ಸಾಕ್ಷಿ. ಆಕ್ಸಿಜನ್ ಕೊರತೆಯಿಂದಾಗಿ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯದ ಅಭಿಪ್ರಾಯವನ್ನು ಅವಮಾನಿಸಿದೆ. ದೇಶದ ಹಲವೆಡೆ ಆಕ್ಸಿಜನ್ ಇಲ್ಲದೇ ಸಾವು ನೋವು ನೋವುಗಳಾಗಿದ್ದು ಇದಕ್ಕೆ ಸಾರ್ವಜನಿಕರು, ಮಾಧ್ಯಮ ಮತ್ತು ನ್ಯಾಯಾಲಯವೇ ಸಾಕ್ಷಿ ಎಂದು ಟ್ವೀಟ್ಟರ್ ನಲ್ಲಿ ಕೇಂದ್ರದ ವಿರುದ್ಧ ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಕಿಡಿ ಕಾರಿದ್ದಾರೆ.

ಮೋದಿ ಸರ್ಕಾರದಲ್ಲಿ ನಿರ್ದಯತೆ, ಭಂಡತನಕ್ಕೆ ಮಿತಿ ಇಲ್ಲದಾಗಿದೆ – ಶಾಸಕ ಯತೀಂದ್ರ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ಧರಾಮಯ್ಯ, ಮಹಾಮಾರಿ ಕೊರೊನಾಗೆ  ವರುಣ ಕ್ಷೇತ್ರದ 120ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಕೊರೋನಾ ಮೊದಲ, ಎರಡನೇ ಅಲೆಯಲ್ಲಿ 120ಕ್ಕೆ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೋದಿ ಸರ್ಕಾರದಲ್ಲಿ ನಿರ್ದಯತೆ, ಭಂಡತನಕ್ಕೆ ಮಿತಿ ಇಲ್ಲದಾಗಿದೆ ಎಂದ ಶಾಸಕ ಯತೀಂದ್ರ ವಾಗ್ದಾಳಿ ನಡೆಸಿದರು.

ಮೈಸೂರು, ಟಿ. ನರಸೀಪುರ, ನಂಜನಗೂಡು ತಾಲ್ಲೂಕುಗಳನ್ನ ಹೊಂದಿರುವ ವರುಣಾ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದಲೂ ಕೊರೋನಾ ಮೃತರ ಮಾಹಿತಿ ಸಂಗ್ರಹಿಸುತ್ತಿದ್ದು , ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಕೊರೊನಾದಿಂದ ಮೃತಪಟ್ಟವರಿಗೆ ಸಹಾಯಹಸ್ತ ನೀಡುತ್ತಿದ್ದಾರೆ. ಮೃತರ ಕುಟುಂಬಗಳಿಗೆ ಕಾಂಗ್ರೆಸ್ ನಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರತಿ ಕುಟುಂಬವನ್ನು ಭೇಟಿ ಮಾಡಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಸಾಂತ್ವನ ಹೇಳುತ್ತಿದ್ದಾರೆ.

ENGLISH SUMMARY…

Centre says nobody has died due to lack of oxygen: Cong. leaders H.C. Mahadevappa, MLA Yateendra Siddaramaiah express ire
Mysuru, July 21, 2021 (www.justkannada.in): Following an answer in the Lok Sabha yesterday that nobody has died due to a shortage of oxygen during the 2nd wave, several Congress leaders in the state have expressed their ire on the centre.
Former Minister H.C. Mahadevappa in a tweet has said, “the committee which has been formed by the Court itself has submitted a report stating that 24 people have died due to shortage of oxygen in Chamarajanagara. Whereas the Modi government is saying that no one has died due to a shortage of oxygen. Modi’s government is crossing all the limits.”
Congress leader Yateendra Siddaramaiah has said that more than 120 people have lost their lives in the Varuna constituency alone due to Coronavirus in the first and second waves. “The Modi government is too heartless and harsh,” he added.
Keywords: Coronavirus/ COVID-19 Pandemic/ Oxygen/ shortage/ nobody has died/ Centre/ PM Narendra Modi

Key words: HC Mahadevappa- MLA -Yatindra Siddaramaiah-outrage – oxygen- Central government