Thursday, August 13, 2026

BDA Apartments

Home Cinema ಕಮಲ್ ಹಾಸನ್ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಿನಿಮಾ ?!

ಕಮಲ್ ಹಾಸನ್ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ಸಿನಿಮಾ ?!

ಬೆಂಗಳೂರು, ನವೆಂಬರ್ 07, 2023 (www.justkannada.in): ಕಮಲ್ ಹಾಸನ್ ನಟನೆಯ ಹೊಸ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪಾತ್ರ ನಟಿಸಲಿದ್ದಾರೆ.

ಹೌದು,  ಜೈಲರ್ ಸಿನಿಮಾದ ಯಶಸ್ಸಿನ ನಂತರ ತಮಿಳಿನಲ್ಲಿ ಶಿವಣ್ಣಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ಕಮಲ್ ಹಾಸನ್ ಸಿನಿಮಾದಲ್ಲಿ ನಟಿಸುವ ಕುರಿತು ಮಾತುಕತೆ ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಸಿನಿಮಾ ಶುರುವಾಗುವುದಕ್ಕೆ ಇನ್ನೂ ಹಲವು ತಿಂಗಳು ಬೇಕು. ಅದಕ್ಕೂ ಮುನ್ನ ಅನೇಕ ವಿಷಯಗಳು ಹೊರ ಬಂದಿವೆ.

ಈ ಸಿನಿಮಾದಲ್ಲಿ ಸ್ಟಾರ್ ನಟರೇ ದಂಡೇ ಇರಲಿದ್ದು, ತ್ರಿಷಾ, ದುಲ್ಕರ್ ಸಲ್ಮಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ನಿರ್ದೇಶಕ ಮಣಿರತ್ನಂ ಹಾಗೂ ಕಮಲ್ ಹಾಸನ್ ಜೋಡಿ ‘ನಾಯಗನ್’ ನಂತರ ಒಟ್ಟಿಗೆ ಕೆಲಸ ಮಾಡುತ್ತಿದೆ. ಇದೀಗ ಮೂರುವರೆ ದಶಕದ ಬಳಿಕ ಮತ್ತೆ ಈ ಜೋರಿ ಒಟ್ಟಾಗಿ ಕೆಲಸ ಮಾಡಲಿದೆ.