ಹಾಸನ, ಸೆ.೧೩,೨೦೨೫: ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಭೀಕರ ಅಪಘಾತದಲದಲ್ಲಿ ಮೃತಪಟ್ಟವರ ಹಿನ್ನೆಲೆ ಹಾಗೂ ವಿವರಗಳ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ.
ಶುಕ್ರವಾರ ರಾತ್ರಿ ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಟ್ಯಾಂಕರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಹರಿದು ದುರ್ಘಟನೆ ಸಂಭವಿಸಿತು. ಈ ಘಟನೆಯಲ್ಲಿ ೯ ಮಂದಿ ಮೃತಪಟ್ಟಿದ್ದು, ಬಹುತೇಕರು ಹದಿಹರೆಯದ ಯುವಕರು ಹಾಗೂ ಪರಿಶಿಷ್ಠ ಜಾತಿ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದವರು.
ಮೃತಪಟ್ಟವರು ಕುರುಬ, ಬೋವಿ, ಈಡಿಗ, ವಿಶ್ವಕರ್ಮ ಹಾಗೂ ಪರಿಶಿಷ್ಠ ಜಾತಿಗೆ ಸೇರಿದ ದುರ್ದೈವಿಗಳು. ಮೃತರ ವಯಸ್ಸು, ಜಾತಿ ಹಾಗೂ ವಿಳಾಸವನ್ನೊಳಗೊಂಡ ಪಟ್ಟಿ ಬಿಡುಗಡೆ ಮಾಡಿದೆ. ಜತೆಗೆ ಘಟನೆಯಲ್ಲಿ ಗಾಯಾಗೊಂಡವರ ಮಾಹಿತಿಯನ್ನು ಸರಕಾರ ಹಂಚಿಕೊಂಡಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿಯಿಡೀ ಅಗತ್ಯ ಕ್ರಮಗಳನ್ನು ಕೈಗೊಂಡಿತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಕ್ಷಣದಿಂದ ರಾತ್ರಿಯಿಡೀ ಅಧಿಕಾರಿಗಳ ತಂಡ-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ತೀವ್ರ ನಿಗಾ ವಹಿಸಿದ್ದಾರೆ.
key words: Hassan “Ganesha Tragedy”, deceased, belong to Scheduled Castes,Backward Classes.
SUMMARY:
Hassan “Ganesha Tragedy”: All the deceased belong to Scheduled Castes and Backward Classes.
The state government has released the background and details of those who died in the horrific accident that occurred during the Ganesh Visarjan.
The deceased belonged to Kuruba, Bovi, Ediga, Vishwakarma and Scheduled Castes. The list of the deceased, including their age, caste and address, has been released. The government has also shared information about those injured in the incident.
A tanker truck lost control and ran over the procession on Friday night during the Ganeshotsava procession. Nine people died in the incident, most of them teenagers and people belonging to the Scheduled Castes and Backward Classes.