ನಟ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಮೇಲೆ ಹಲ್ಲೆ ಕೇಸ್: ನಾಲ್ವರ ಜಾಮೀನು ಅರ್ಜಿ ವಜಾ.

ಬೆಂಗಳೂರು,ಜೂನ್,12,2024 (www.justkannada.in):  ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಫರ್ವೇಜ್ ಅಲಿ ಫಹೀಮ್, ದನೀಶ್ ಅಲಿ ಫರ್ವೇಜ್, ಶಾಬಾಜ್ ಖಾನ್ ಸೇರಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ.  ಪ್ರಕರಣ ಸಂಬಂಧ ವಾದ ಮಂಡಿಸಿದ ಸರ್ಕಾರಿ ವಕೀಲೆ ಕೆಪಿ ಯಶೋಧ,  ಅವಾಚ್ಯ  ಶಬ್ದಗಳಿ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.

ವಾದ ಆಲಿಸಿದ ಹೈಕೋರ್ಟ್ ನಾಲ್ವರ ಜಾಮೀನು ಆರ್ಜಿಯನ್ನ ವಜಾಗೊಳಿಸಿದೆ.  ಹರ್ಷಿಕಾ ಹಾಗೂ ಭುವನ್ ಕೆಲವು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮಾ ಎಂಬ ಹೋಟೆಲ್ ಗೆ ಹೋಗಿ ಊಟ ಮಾಡಿ ವಾಪಸ್ ಬರುತ್ತಿದ್ದರು. ಈ ವೇಳೆ ಆರೋಪಿಗಳು ತಗಾದೆ ತೆಗೆದು ಜಗಳ ಮಾಡಿದ್ದರು. ಬಳಿಕ ಅವರ ಭಾಷೆಯಲ್ಲಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

Key words:  Harshika Poonacha, Bhuvan, assault case