Monday, August 3, 2026

BDA Apartments

Home Front Page ಸರ್ಕಾರದ ಕ್ರಮ ಸಾಲದು: ಆರೋಪಿಗಳನ್ನ ಗಲ್ಲಿಗೇರಿಸಬೇಕು- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಸರ್ಕಾರದ ಕ್ರಮ ಸಾಲದು: ಆರೋಪಿಗಳನ್ನ ಗಲ್ಲಿಗೇರಿಸಬೇಕು- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಶಿವಮೊಗ್ಗ,ಫೆಬ್ರವರಿ,24,2022(www.justkannada.in) ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಮಾಡಿದ ಹಂತಕರ ವಿರುದ್ಧ ಸರ್ಕಾರದ ಕ್ರಮ ಸಾಲದು.  ಆರೋಪಿಗಳನ್ನ ಗಲ್ಲಿಗೇರಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಿಂದೂಗಳ ಆತ್ಮಸ್ಥೈರ್ಯ  ಕುಗ್ಗಿಸಲು ಇಂತಹ ಕೃತ್ಯ ನಡೆದಿದೆ.  ಇವರು ಸ್ವಂತ ಶೂರರಲ್ಲ. ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಕೃತ್ಯವೆಸಗಿದ್ದಾರೆ.   ಕಾಂಗ್ರೆಸ್ ಸರ್ಕಾರದ ವೇಳೆ ಇಂತಹ ಕೃತ್ಯಕ್ಕೆ ಶಿಕ್ಷೆ ಆಗಿಲ್ಲ.  ರಾಜ್ಯ ಸರ್ಕಾರ ಇದನ್ನ ಗಂಭಿರವಾಗಿ ತೆಗೆದುಕೊಳ್ಳಬೇಕು ಎಂದರು.

ಭಜರಂಗದಳದ ಕಾರ್ಯಕರ್ತನ ಹತ್ಯೆಯಾದರೂ ಒಬ್ಬ ಕಾಂಗ್ರೆಸ್ ನಾಯಕರಾದ್ರೂ ಬಂದ್ರಾ.  ಮುಸ್ಲೀಂ ಆಗಿದ್ದರೇ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಬರುತ್ತಿದ್ದರು ಎಂದು ಯತ್ನಾಳ್ ಕಿಡಿಕಾರಿದರು.

Key words: Harsha-murder-case-action-MLA-Basanagowda Patil Yatnal