Saturday, September 19, 2026

BDA Apartments

ಆರೋಗ್ಯ ಇಲಾಖೆಗೆ “ಗುಪ್ತ” ಸರ್ಜರಿ : ಜನತೆಗೆ ತಂದಿದೆ “ಹರ್ಷ”.! BDA JK_Adv BDA Adv
Home Front Page ಆರೋಗ್ಯ ಇಲಾಖೆಗೆ “ಗುಪ್ತ” ಸರ್ಜರಿ : ಜನತೆಗೆ ತಂದಿದೆ “ಹರ್ಷ”.!

ಆರೋಗ್ಯ ಇಲಾಖೆಗೆ “ಗುಪ್ತ” ಸರ್ಜರಿ : ಜನತೆಗೆ ತಂದಿದೆ “ಹರ್ಷ”.!

Harsha Gupta, Principal Secretary, Department of Health, is proof of what a change can be made in the department if a government official works with commitment to his profession.

vtu

ಬೆಂಗಳೂರು, ಜೂ.೧೭, ೨೦೨೫: ಸರ್ಕಾರಿ ಅಧಿಕಾರಿಯೋರ್ವ ವೃತ್ತಿ ಬದ್ಧತೆಯಿಂದ ಕೆಲಸ ಮಾಡಿದರೆ ಇಲಾಖೆಯಲ್ಲಿ ಏನೆಲ್ಲಾ ಬದಲಾವಣೆ ಮಾಡಬಹುದು ಎನ್ನುವುದಕ್ಕೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರೇ ಸಾಕ್ಷಿ.

ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದ ಎಂಟು ಮಹಡಿಗಳ ಯಾವುದೇ ಮೂಲೆಗೆ ಹೋದರೂ ಈಗ ಹರ್ಷಗುಪ್ತ ಅವರ ಆಡಳಿತ ವೈಖರಿಯದ್ದೇ ಮಾತು.  ಅವರು ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇಡೀ ಇಲಾಖೆಯ ನೌಕರರು ಇದೀಗ ಮೈಚಳಿ ಬಿಟ್ಟು ಕೆಲಸ ಮಾಡಲಾರಂಭಿಸಿದ್ದಾರೆ.  ಅವರ ಈ ಕಾರ್ಯಶೈಲಿಯಿಂದ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದ್ದು ದುಂದು ವೆಚ್ಚ ಆಗುತ್ತಿದ್ದ ಕೋಟ್ಯಾಂತರ ಹಣ ಸರ್ಕಾರಕ್ಕೆ ಉಳಿತಾಯವಾಗುತ್ತಿದೆ.

ಆರೋಗ್ಯ ಇಲಾಖೆ ಸಚಿವಾಲಯ ಹಾಗೂ ನಿರ್ದೇಶನಾಲಯದಲ್ಲಿ ‘ಎ’ ದರ್ಜೆ ಅಧಿಕಾರಿಯಿಂದ ಹಿಡಿದು ‘ಡಿ’ ದರ್ಜೆ ನೌಕರರವರೆಗೂ ಶೇ. 80ಕ್ಕಿಂತ ಹೆಚ್ಚು ಮಂದಿ ಸಮಯ ಪಾಲನೆ ಮಾಡುತ್ತಿರಲಿಲ್ಲ.  ತಡವಾಗಿ ಕಚೇರಿಗೆ ಬರುವುದು, ಸಂಜೆ ಅವಧಿಗೆ ಮೊದಲು ಕಚೇರಿಯಿಂದ ನಿರ್ಗಮಿಸುವುದು ಚಾಳಿಯಾಗಿತ್ತು.  ಅಧಿಕಾರ ವಹಿಸಿಕೊಂಡ ಒಂದೇ ವಾರದಲ್ಲಿ ಇದಕ್ಕೆ ಕಡಿವಾಣ ಹಾಕಿದ ಹರ್ಷಗುಪ್ತ ಅವರು ಇಡೀ ಇಲಾಖೆಯಲ್ಲಿ ಸಮಯಪಾಲನೆ ಅಂದರೆ ಏನು ಎನ್ನುವುದನ್ನು ನೌಕರರಿಗೆ, ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳಂತೂ ತಮಗೆ ನೀಡಲಾಗಿದ್ದ ವಾಹನಗಳನ್ನು ಮನಸ್ಸೋ ಇಚ್ಛೆ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.  ಅಧಿಕಾರಿಗೆ ಒಂದು ವಾಹನ, ಪತ್ನಿಗೆ ಒಂದು ವಾಹನ, ಮಕ್ಕಳಿಗೆ ಒಂದು ವಾಹನ…. ಈ ರೀತಿ ಸರ್ಕಾರಿ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಪತ್ತೆ ಹಚ್ಚಿ ಅಂತಹ ಹೆಚ್ಚುವರಿ ವಾಹನಗಳನ್ನು ಹಿಂದಕ್ಕೆ ಪಡೆದಿದ್ದಾರೆ.  ನಿರ್ದಿಷ್ಠ ಅಧಿಕಾರಿ ಬಳಸುವ ವಾಹನಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎನ್ನುವ ಬಗ್ಗೆ ನಿಗಾ ವಹಿಸಲು ಒಂದು ವ್ಯವಸ್ಥೆಯನ್ನೇ ರೂಪಿಸಿ ಕೋಟ್ಯಾಂತರ ರೂ ದುಂದು ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ.  ಇದಲ್ಲದೆ, ಖಾಸಗಿ ಒಡೆತನದಲ್ಲಿರುವ 108 ಆಂಬುಲೆನ್ಸ್ ಸೇವೆಯನ್ನು ಸರ್ಕಾರದ ತೆಕ್ಕೆಗೆ ತರಲು ಗುಪ್ತ ಅವರು ನಿರ್ಧರಿಸಿದ್ದಾರೆ.  ಸರ್ಕಾರಿ ಚಾಲಕರನ್ನೇ ಬಳಸಿ ಈ ಯೋಜನೆ ಇನ್ನಷ್ಟು ಜನರಿಗೆ ಹತ್ತಿರವಾಗುವಂತೆ ಮಾಡಬೇಕೆಂಬುವುದು ಅವರ ಹಂಬಲ.

ಜನತೆಗೆ ತಂದಿದೆ “ಹರ್ಷ”.! health

ಇಲಾಖೆಯ ಎಲ್ಲಾ ಕಡತಗಳನ್ನು ಇ-ಆಫೀಸ್ ಮುಖಾಂತರ ಕಳುಹಿಸಬೇಕು ಎನ್ನುವ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಜಾರಿಗೆ ತಂದಿದ್ದಾರೆ.  ಇದರಿಂದಾಗಿ ಭೌತಿಕ ಕಡತಗಳ ಚಾಲನೆಗೆ ಕಡಿವಾಣ ಬಿದ್ದಿದ್ದು ಈಗ ಕ್ಷಿಪ್ರಗತಿಯಲ್ಲಿ ಕಡತಗಳ ವಿಲೇವಾರಿಯಾಗುತ್ತಿವೆ.  ಕಡತ ವಿಲೇವಾರಿ ನೆಪದಲ್ಲಿ ಕಾಲಹರಣ ಮಾಡುತಿದ್ದ ‘ಡಿ’ ದರ್ಜೆ ನೌಕರರನ್ನು ಗುರುತಿಸಿ ಅವರನ್ನು ಅಗತ್ಯ ಇರುವ ಸರ್ಕಾರಿ ಆಸ್ಪತ್ರೆಗಳ ಕೆಲಸಕ್ಕೆ ನಿಯೋಜಿಸುವ ಅದ್ಭುತ ಕಲ್ಪನೆಯನ್ನು ಜಾರಿಗೊಳಿಸಲು ಹರ್ಷಗುಪ್ತ ಮುಂದಾಗಿದ್ದಾರೆ.  ಅದಕ್ಕಾಗಿ ಕಡತ ಸಿದ್ದಪಡಿಸಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಆರೋಗ್ಯ ಇಲಾಖೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಉದ್ಯೋಗಿಗಳು ಒಂದೇ ಸ್ಥಳದಲ್ಲಿ ಹತ್ತಾರು ವರ್ಷಗಳಿಂದ ಠಿಕಾಣಿ ಹೂಡಿ ರಾಜ್ಯಭಾರ ಮಾಡುತ್ತಿದ್ದರು.  ಅಂತಹವರನ್ನೆಲ್ಲಾ ಗುರುತಿಸಿ ಬೃಹತ್ ವರ್ಗಾವಣೆ ಪಟ್ಟಿ ಸಿದ್ಧಪಡಿಸಿಟ್ಟುಕೊಂಡಿರುವ ಗುಪ್ತ ಅವರು, ಯಾವುದೇ ಮುಲಾಜಿಗೆ ಒಳಗಾಗದೆ, ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಕೌನ್ಸಿಲಿಂಗ್ ಮುಖಾಂತರವೇ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಪ್ರಸಕ್ತ ವರ್ಷದ ಆರೋಗ್ಯ ಇಲಾಖೆಯ ವರ್ಗಾವಣೆ ಪಟ್ಟಿ ಕರ್ನಾಟಕ ಇತಿಹಾಸದಲ್ಲಿಯೇ ಒಂದು ಮೈಲಿಗಲ್ಲು ಎನ್ನುವಷ್ಟರ ಮಟ್ಟಿಗೆ ಚರ್ಚೆ ನಡೆದಿದೆ.  ಇಲಾಖೆಯ ಸುಧಾರಣೆ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಚ್ಚೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.  ಇದಕ್ಕೆ ಕಾರಣಕರ್ತರಾದ ಹರ್ಷಗುಪ್ತ ನಿಜಕ್ಕೂ ಅಭಿನಂದನಾರ್ಹರು.

ಹರ್ಷಗುಪ್ತ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿಸಲು ಇಲಾಖೆಯೊಳಗಿನ ಬಲಾಡ್ಯ ಶಕ್ತಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಅವರ ವೃತ್ತಿ ಬದ್ಧತೆಯ ಕಾರಣಕ್ಕೆ ಅದು ಸಾಧ್ಯವಾಗಿಲ್ಲ.  ಇದರಿಂದ ನಿರಾಶರಾಗಿರುವ ಹಲವು ಅಧಿಕಾರಿಗಳು ತಮಿಳು ನಾಡು, ಕೇರಳದಲ್ಲಿ ದೇವರ ಮೊರೆ ಹೊಕ್ಕು ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದಾರೆ!!

ಇದೇ ಹರ್ಷಗುಪ್ತ ಚಿಕ್ಕಮಗಳೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರು.  ಇವರು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದಾಗ ದಿವಂಗತ ಮಧುಕರ ಶೆಟ್ಟಿ ಅವರು ಎಸ್ಪಿ ಆಗಿದ್ದರು. ಬಡವರು ಹಾಗೂ ಶೋಷಿತರ ಪರ ಸದಾ ತುಡಿಯುತ್ತಿದ್ದ ಈ ಇಬ್ಬರು ಅಧಿಕಾರಿಗಳು ಯಾವುದೋ ಒಂದು ವಿವಾದದಲ್ಲಿ ಬಲಾಢ್ಯರ ಬೆವರಿಳಿಸಿ ಬಡವರ ಪರವಾಗಿ ನಿಂತಿದ್ದರು.  ಅದಕ್ಕೆ ಕೃತಜ್ಞತೆ ಎನ್ನುವಂತೆ ಅವರಿಂದ ನೆರವು ಪಡೆದ ಜನ ತಮ್ಮ ಊರಿಗೆ ಗುಪ್ತಶೆಟ್ಟಿ ಹಳ್ಳಿ ಎಂದು ನಾಮಕರಣ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಕೃಪೆ : ಜಾನ್‌ ಮಥಾಯಿಸ್‌,

key words: Harsha Gupta, Principal Secretary, Department of Health, commitment, profession.

vtu

SUMMARY: 

Harsha Gupta, Principal Secretary, Department of Health, is proof of what a change can be made in the department if a government official works with commitment to his profession.

harsha gupta principal harsha-guptha harsha guptha

No matter where you go in the eight-storey building of the Arogya Soudha on Magadi Road, you can see Harshagupta’s administrative style. Due to the strict measures he has taken, the employees of the entire department have now started working without any hesitation. Due to his working style, there has been a lot of improvement in the department and the government is saving crores of rupees that were being wasted.