ಉಪ್ಪಿ-ಶಶಾಂಕ್ ಕಾಂಬಿನೇಷನ್ ಚಿತ್ರಕ್ಕೆ ಹರಿಪ್ರಿಯಾ ನಾಯಕಿ!

ಬೆಂಗಳೂರು, ಮಾರ್ಚ್ 20, 2021 (www.justkannada.in): ಉಪೇಂದ್ರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ.

ಸ್ಟಾರ್ ನಿರ್ದೇಶಕ ಶಶಾಂಕ್ ಜೊತೆ ಸಿನಿಮಾ ಮಾಡಲು ಉಪ್ಪಿ ಸಾಕಷ್ಟು ಹಿಂದಿನಿಂದ ತಯಾರಿ ನಡೆಸುತ್ತಿದ್ದಾರೆ.

ಈಗಾಗಲೇ ಸಿನಿಮಾಗೆ ರುಕ್ಮಿಣಿ ವಸಂತ್ ಮತ್ತು ನಿಶ್ವಿಕಾ ಆಯ್ಕೆಯಾಗಿದ್ದರು. ಆದರೆ ರುಕ್ಮಿಣಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇದ್ದು, ನಿಶ್ವಿಕಾ ನಟಿಸುವುದು ಬಹುತೇಕ ಖಚಿತವಾಗಿದೆ.

ಚಿತ್ರದ ಶೀರ್ಷಿಕೆ ಅಂತಿಮವಾಗಿಲ್ಲ. ಕಬ್ಜ ಬಳಿಕ ಉಪೇಂದ್ರ ಶಶಾಂಕ್ ಜೊತೆ ಸಿನಿಮಾ ಪ್ರಾರಂಭ ಮಾಡಲಿದ್ದಾರೆ.