ಹುಣಸೂರಿನಲ್ಲಿ ಅದ್ದೂರಿ ಹನುಮ ಜಯಂತಿ: ಶಾಂತಿಯುತ ಮೆರವಣಿಗೆಯಲ್ಲಿ ಸಾಗಿದ ಭಕ್ತರು

ಮೈಸೂರು ,ಡಿಸೆಂಬರ್,4,2025 (www.justkannada.in): ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು.

ಟ್ರ್ಯಾಕ್ಟರ್‌ ಗಳಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು ಶೋಭ ಯಾತ್ರೆ‌ ಕೈಗೊಂಡಿದ್ದು ಪುಷ್ಪಾರ್ಚನೆ ಮಾಡುವ ಮೂಲಕ  ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಶಾಸಕ ಹೆಚ್.ಪಿ ಮಂಜುನಾಥ್, ಶಾಸಕ ಹರೀಶ್‌ ಗೌಡ, ಗಾವಡಗೆರೆ ಶ್ರೀಗಳು ಶೋಭಾಯಾತ್ರೆಗೆ ಚಾಲನೆ ನೀಡಿದರು.

ರಂಗನಾಥ ಬಡಾವಣೆಯಲ್ಲಿ ಶ್ರೀ ಆಂಜನೇಯಸ್ವಾಮಿ, ಭಜರಂಗಿ, ರಾಮ- ಲಕ್ಷ್ಮಣ- ಸೀತೆ, ದತ್ತಾತ್ರೇಯ ಮೂರ್ತಿಗಳ ಮೆರವಣಿಗೆ ನಡೆದಿದ್ದು, ನೂರಾರು ಭಕ್ತರು ಕೇಸರಿ ಟೀ ಶರ್ಟ್, ಶಾಲು ತೊಟ್ಟು ಗುಂಪು ಗುಂಪಾಗಿ ಮೆರವಣಿಗೆಯಲ್ಲಿ ಸಾಗಿದರು.  ಭಕ್ತರಿಗೆ ರಸ್ತೆಯುದ್ದಕ್ಕೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ರೈಟ್- ಲೆಫ್ಟ್ ಬ್ಯಾಡ್ಜ್ ತೊಟ್ಟು ಪೊಲೀಸರು ಭದ್ರತೆ ವಹಿಸಿದ್ದು ಮೆರವಣಿಗೆಯು ಶಾಂತಿಯುತವಾಗಿ ಸಾಗಿತು.

Key words: Hanuman Jayanti, Hunsur, Devotees, peaceful, march