ಮೈಸೂರಿನಲ್ಲಿ ಹನುಮ ಜಯಂತಿ: ಇದೇ ಮೊದಲ ಬಾರಿಗೆ ಬೃಹತ್ ಮೆರವಣಿಗೆ: ರಾಜವಂಶಸ್ಥ ಯದುವೀರ್ ಸೇರಿ ಹಲವರು ಭಾಗಿ…

ಮೈಸೂರು,ಡಿ,14,2019(www.justkannada.in): ಬೆಳ್ಳಿರಥದ ಮೇಲೆ ಹನುಮ ಉತ್ಸವ‌ಮೂರ್ತಿ ಮೆರವಣಿಗೆ. ವೀರಗಾಸೆ, ತಮಟೆ ನಗಾರಿ, ಕೀಲು ಕುದುರೆ ಸೇರಿ ಮುಂತಾದ ಕಲಾತಂಡಗಳ ಮೆರಗು. ಕೇಸರಿಮಯವಾದ ನಗರ ಕೇಂದ್ರಭಾಗ. ಇದು ಕಂಡು ಬಂದಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ…

ಹೌದು  ಮೈಸೂರಿಗೂ ಹನುಮ ಜಯಂತಿ ಕಾಲಿಟ್ಟಿದ್ದು ಇದೇ ಮೊದಲ ಬಾರಿಗೆ ಹನುಮ ಜಯಂತಿ ಬೃಹತ್ ಮೆರವಣಿಗೆ ಆಯೋಜಿಸುವ ಮೂಲಕ  ಹಿಂದೂ ಪರ ಸಂಘಟನೆಗಳು ಹೊಸ ಸಂಪ್ರದಾಯಕ್ಕೆ ನಾಂದಿಯಾಡಿದವು. ಅರಮನೆ ಕೋಟೆ ಆಂಜನೇಯಸ್ವಾಮಿ ಆವರಣದಲ್ಲಿ ಹನುಮ ಜಯಂತಿ ಬೃಹತ್ ಮೆರವಣಿಗೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.

ಬಳಿಕ ಬೆಳ್ಳಿರಥದ ಮೇಲೆ ಹನುಮ ಉತ್ಸವ‌ಮೂರ್ತಿ ಬೃಹತ್ ಮೆರವಣಿಗೆ ಸಾಗಲಾಯಿಯಿತು. ಅಶೋಕ ರಸ್ತೆ, ನ್ಯೂ ಸಯ್ಯಾಜಿ ರಾವ್ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಮೆರವಣಿಗೆ ಮಹಾರಾಜ ಕಾಲೇಜು ಮೈದಾನ  ತಲುಪಿತು. ಈ ಶೋಭಾಯಾತ್ರೆಗೆ ದ ಹನುಮ ಉತ್ಸವ ಮೂರ್ತಿಗಳು ಮೆರಗು ತಂದವು. ಮೆರವಣಿಗೆ ವೇಳೆ ವೀರಗಾಸೆ, ತಮಟೆ ನಗಾರಿ, ಕೀಲು ಕುದುರೆ ಸೇರಿ ಮುಂತಾದ ಕಲಾತಂಡಗಳು‌ ತಮ್ಮ ಪ್ರದರ್ಶನ ತೋರುವ ಮೂಲಕ ಎಲ್ಲರ ಗಮನ ಸೆಳೆದವು.

ಮೆರವಣಿಗೆತಲ್ಲಿ ತಮಟೆ ಸದ್ದಿಗೆ ಯುವ ಸಮೂಹ ಹುಚ್ಚೆದ್ದು ಕುಣಿಯಿತು.  ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಚಿತ್ರ ನಟ ವರಶಿಷ್ಠಸಿಂಹ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.

Key words: Hanuma Jayanti – Mysore-first time – massive parade