ಮದುವೆ ಅಂತೆ, ಕಂತೆಗಳ ಕುರಿತು ಸ್ಪಷ್ಟನೆ ನೀಡಿದ ಹಂಸಿಕಾ !

ಚೆನ್ನೈ, ಜೂನ್ 12, 2020 (www.justkannada.in): ನಟಿ ಹಂಸಿಕಾ ಮೊಟ್ವಾನಿ ಮದುವೆ ವಿಚಾರದ ಕುರಿತು ಮಾತನಾಡಿದ್ದಾರೆ.

ಹಂಸಿಕಾ ಸದ್ಯದಲ್ಲೇ ಮದುವೆ ಆಗ್ತಾರಂತೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಈ ಬಗ್ಗೆ ನಟಿಯ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ ಹಂಸಿಕಾ ಮುಂಬೈ ಮೂಲದ ಉದ್ಯಮಿಯೊಬ್ಬರ ಕೈ ಹಿಡಿಯಲಿದ್ದಾರಂತೆ.
ಇದಕ್ಕಾಗಿ ನಟನೆಗೆ ಗುಡ್ ಬೈ ಹೇಳಲಿದ್ದಾರಂತೆ ಎಂಬ ಸುದ್ದಿ ಹರಡಿತ್ತು.

ಈ ಬಗ್ಗೆ ಹಂಸಿಕಾ ತಮ್ಮ ಟ್ವಿಟರ್ ಪೇಜ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಸದ್ಯಕ್ಕೆ ಹಂಸಿಕಾ ‘ಮಹಾ’ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದು ಅವರ 50 ನೇ ಸಿನಿಮಾಗಿರಲಿದೆ.