ಟಿಪ್ಪು ಕುರಿತು ಹೆಚ್.ವಿಶ್ವನಾಥ್ ಹೇಳಿಕೆ ವೈಯಕ್ತಿಕ : ಅದು ಬಿಜೆಪಿ ಅಭಿಪ್ರಾಯವಲ್ಲ – ಗಣೇಶ್ ಕಾರ್ಣಿಕ್…

ಬೆಂಗಳೂರು,ಆಗಸ್ಟ್,2020(www.justkannada.in):  ಟಿಪ್ಪುಸುಲ್ತಾನ್  ಬಗ್ಗೆ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್  ಹೇಳಿಕೆ ನೀಡಿರುವುದು ಅವರ ವೈಯಕ್ತಿಕ ಅಭಿಪ್ರಾಯ  ಇದು ಬಿಜೆಪಿ ಅಭಿಪ್ರಾಯವಲ್ಲ. ಬಿಜೆಪಿ  ಮುಖಂಡ ಗಣೇಶ್ ಕಾರ್ನಿಕ್ ತಿಳಿಸಿದ್ದಾರೆ.jk-logo-justkannada-logo

ಹೆಚ್.ವಿಶ್ವನಾಥ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್ , ಟಿಪ್ಪು ಸುಲ್ತಾನ್ ಓರ್ವ ಮತಾಂಧನಾಗಿದ್ದ ಎಂಬುದಕ್ಕೆ ಪಕ್ಷ ಬದ್ಧವಾಗಿದೆ. ಅವನು ಮತಾಂಧನಾಗಿದ್ದ ಎಂಬುದಕ್ಕೆ ಇತಿಹಾಸದಲ್ಲಿ ಸಾಕ್ಷಿಗಳಿವೆ. ಇದಕ್ಕೆ ಪಕ್ಷ ಸಂಪೂರ್ಣ ಬದ್ದವಾಗಿದೆ ಎಂದು ಅವರು ತಿಳಿಸಿದ್ದಾರೆ.

ಟಿಪ್ಪು ಸುಲ್ತಾನ್ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವ ಯತ್ನದಲ್ಲಿ ಕೊಡಗಿನಲ್ಲಿ ಸಹಸ್ರಾರು ಹಿಂದೂಗಳನ್ನು ಹಾಗೂ ಮಂಗಳೂರಿನಲ್ಲಿರು ಕ್ರಿಶ್ಚಿಯರನ್ನು ಮಾರಣಹೋಮ ಮಾಡಿದ್ದನ್ನು ಮರೆಯಲಾಗದು.  ಟಿಪ್ಪು ಸುಲ್ತಾನ್ ಕತ್ತಿಯ ಹರಿತದಿಂದ ಜನರನ್ನು ಮತಾಂತರಗೊಳಿಸಲು ಯತ್ನಿಸಿದ್ದ ಮತ್ತು ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿಸುವ ಮೂಲಕ ಕನ್ನಡ ವಿರೋಧಿಯೂ ಆಗಿದ್ದ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಎಂದಿಗೂ ಟಿಪ್ಪು ಸುಲ್ತಾನನನ್ನು ಒಳ್ಳೆಯ ಆಡಳಿತಗಾರ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.H. Vishwanath- statement – Tippu- personal- Ganesh Karnik – not- BJP- opinion

ಇತ್ತೀಚೆಗೆ ಟಿಪ್ಪು ಬಗ್ಗೆ ಮಾತನಾಡಿದ್ದ ವಿಶ್ವನಾಥ್ ಅವರು ಟಿಪ್ಪು ಸುಲ್ತಾನ್ ಸ್ವಾತಂತ್ರ್ಯದ ಸೇನಾನಿ. ಅವರು ಈ ನೆಲದ ಮಗ ಎಂದು ಹೇಳಿದ್ದರು.

Key words: H. Vishwanath- statement – Tippu- personal- Ganesh Karnik – not- BJP- opinion