ಮೈಸೂರು,ಮೇ,19,2025 (www.justkannada.in): ರಾಜ್ಯಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಾಳೆ ವಿಜಯನಗರದ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಲು ಮುಂದಾಗಿದ್ದು ಈ ಕುರಿತು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್.ವಿಶ್ವನಾಥ್, ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುವಂತಹ ಏನು ಸಾಧನೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸ್ವಂತ ಜಿಲ್ಲೆಯಲ್ಲಿ ಏನು ಸಾಧನೆ ಮಾಡಿದ್ದಾರೆ. ಬರೀ ಹೆಲಿಕಾಪ್ಟರ್ ನಲ್ಲಿ ಓಡಾಡಿದ್ದೇ ನಿಮ್ಮ ಸಾಧನೆಯಾ..? ಹೆಲಿಕಾಪ್ಟರ್ ನಲ್ಲಿ ಓಡಾಡಲು ಎಷ್ಟು ಖರ್ಚು ಮಾಡಿದ್ದೀರಿ ಇದನ್ನು ನಿಮ್ಮ ಸಾಧನಾ ಸಮಾವೇಶದಲ್ಲಿ ಹೇಳಿ. ಮುಡಾ ಹಗರಣದ ಬಗ್ಗೈಯೂ ಸಮಾವೇಶದಲ್ಲಿ ತಿಳಿಸಬೇಕು. ಇಲ್ಲಿದಿದ್ರೆ ನಾವು ನಿಮ್ಮ ವೈಪ್ಯಲ್ಯವನ್ನು ಜನರಿಗೆ ತೋರಿಸುತ್ತೇವೆ ಎಂದು ಕಿಡಿಕಾರಿದರು.
Key words: helicopter, CM Siddaramaiah, Sadhana conference H. Vishwanath