ಹೆಚ್.ವಿಶ್ವನಾಥ್ ರಿಗೆ 75ರ ಸಂಭ್ರಮ: ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದಲ್ಲಿ ನಾಳೆ ನನ್ನ ನೇತೃತ್ವದಲ್ಲೇ ಹಲವು ಕಾರ್ಯಕ್ರಮ – ಶಾಸಕ ಸಾ.ರಾ ಮಹೇಶ್..

ಮೈಸೂರು,ಮೇ,7,2022(www.justkannada.in): ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ 75ರ ಸಂಭ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಹೊರತಾಗಿ  ಮೇ.8,9,10ರಂದು ಹೆಚ್. ಶ್ವನಾಥ್ 75ರ ಹುಟ್ಟುಹಬ್ಬ ಸಂಭ್ರಮ ಕಾರ್ಯಕ್ರಮ ಮಾಡುತ್ತಿದ್ದೇವೆ. ಹುಟ್ಟುಹಬ್ಬ ಕಾರ್ಯಕ್ರಮದ ನೇತೃತ್ವ ನಾನೇ ವಹಿಸಿದ್ದೇನೆ ಎಂದು ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಪತನದ ನಂತರ ಎಂಎಲ್ ಸಿ ಹೆಚ್.ವಿಶ್ವನಾಥ್ ಹಾಗೂ ಶಾಸಕ ಸಾ.ರಾ ಮಹೇಶ್ ನಡುವೆ ದೊಡ್ಡಮಟ್ಟದ  ಟಾಕ್ ವಾರ್, ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣದ ಹೈಡ್ರಾಮಾ ನಡೆದಿತ್ತು. ಈ ಮಧ್ಯೆ ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಹುಟ್ಟುಹಬ್ಬದ  ಸಂಭ್ರಮದಲ್ಲಿ ಕ್ಷೇತ್ರದಲ್ಲಿ ಹಲವು ಕಾರ್ಯಕ್ರಮವನ್ನ ಹಮ್ಮಿಕೊಂಡಿರುವುದಾಗಿ ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.mlc-h-vishwanath-appreciated-mla-sa-ra-mahesh-work

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ  ಶಾಸಕ ಸಾರಾ ಮಹೇಶ್, ರಾಜಕಾರಣವೇ ಬೇರೆ, ವೈಯಕ್ತಿಕ ಜೀವನವೇ ಬೇರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಚಾರದಲ್ಲಿ ವೈಯಕ್ತಿಕ ಟೀಕೆ ಟಿಪ್ಪಣಿಗಳಾಗಿವೆ. ಅದನ್ನ ಮೈಸೂರಿನಲ್ಲಿ ನಾನು ಹಾಗೂ ವಿಶ್ವನಾಥ್ ರವರು ಹೆಚ್ಚಾಗಿಯೇ ಮಾಡಿದ್ದೇವೆ. ಆದರೆ ಅವರು ನಮ್ಮ ಕ್ಷೇತ್ರದ ಹಿರಿಯ ರಾಜಕಾರಣಿ. ಸಾರ್ವಜನಿಕ ಜೀವನದಲ್ಲಿ  75ವರ್ಷ ಪೂರೈಸಿದ್ದಾರೆ‌. ಕ್ಷೇತ್ರದ ಶಾಸಕನಾಗಿ ಅವರ ಹುಟ್ಟುಹಬ್ಬದ ಕಾರ್ಯಕ್ರಮದ ನೇತೃತ್ವವನ್ನು ನಾನೇ ವಹಿಸಿದ್ದೇನೆ. ಸ್ವಾಗತ ಸಮಿತಿಯ ಅಧ್ಯಕ್ಷನೂ ಕೂಡಾ ನಾನೇ ಆಗಿದ್ದೇನೆ. ಪಕ್ಷೇತರವಾಗಿ ಕಾರ್ಯಕ್ರಮ ಮಾಡ್ತಿದ್ದೇವೆ. ಕ್ಷೇತ್ರದ ಶಾಸಕನಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗೋದು ನನ್ನ ಜವಾಬ್ದಾರಿ . ಚುನಾವಣೆ ಸಂದರ್ಭವೇ ಬೇರೆ ಆದರೆ ವೈಯುಕ್ತಿಕ ವಿಚಾರವೇ ಬೇರೆ ಎಂದಿದ್ದಾರೆ.covid-mysore-mla-sara-mahesh-against-government-mysore-district-administration

ಮೇ.8,9,10ರಂದು ವಿಶ್ವನಾಥ್ 75ರ ಸಂಭ್ರಮ ಕಾರ್ಯಕ್ರಮ ಮಾಡ್ತಿದ್ದೇವೆ. ಇದು ರಾಜಕೀಯ ಹೊರತಾದಂತ ಕಾರ್ಯಕ್ರಮ. ಹಾಗಾಗಿ ಕಾರ್ಯಕ್ರಮಕ್ಕೆ ಕ್ಷೇತ್ರದ ಹೆಚ್ಚಿನ ಜನರು‌ ಭಾಗವಹಿಸಬೇಕು. ಹೆಚ್.ವಿಶ್ವನಾಥ್ ರ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆ.ಆರ್ ನಗರದಲ್ಲಿ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇವೆ. ಸಂಗೀತ ಕಾರ್ಯಕ್ರಮ, ಮೆರವಣಿಗೆ, ಶುದ್ದ ಕುಡಿಯುವ ನೀರಿನ ಘಟಕ ಲೋಕಾರ್ಪಣೆ ಸೇರಿ ಹಲವು ಕಾರ್ಯಕ್ರಮ ನಡೆಯಲಿದೆ. ಭಾನುವಾರ ಅದ್ದೂರಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಆದಿ ಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಜೆ ಎಸ್ ಎಸ್ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಗುರು ಪೀಠದ ನಿರಂಜನನಂದ ಪುರಿ ಸ್ವಾಮೀಜಿ, ಫಾದರ್ ಜೆ ಜೋಸೆಫ್, ಜಾಮೀಯಾ ಮಸೀದಿ ಅಲೀ ಹಸನ್ ಹಿಮಾಮ್ ಸೇರಿ ಹಲವು ಶ್ರೀಗಳು ಭಾಗಿಯಾಗಲಿದ್ದಾರೆ ಎಂದರು.

ತಮ್ಮ ಕುಟುಂಬದ  ವಿರುದ್ಧ ಆರ್ ಟಿಐ ಕಾರ್ಯಕರ್ತ ಗಂಗರಾಜ ಗಂಭೀರ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿ ತಿರುಗೇಟು ನೀಡಿದ  ಶಾಸಕ ಸಾ.ರಾ ಮಹೇಶ್, ಮೊದಲು ವರದಿ ಬರಲಿ ಆಮೇಲೆ ಮಾತನಾಡೋಣ. ಮೊದಲು  ಗೋಮಾಳ ಆಯ್ತು, ಆ ಮೇಲೆ ರಾಜಕಾಲುವೆ, ಈಗ ಸೈಟ್. ಮುಂದೆ ಏನ್ ಏನ್ ಬರಬಹುದೊ ಗೊತ್ತಿಲ್ಲ. ಅದಕ್ಕಾಗಿ ನಾನು ವರದಿ ಬಂದ ಮೇಲೆ ಇದರ ಬಗ್ಗೆ ಮಾತನಾಡುತ್ತೇನೆ. ವರದಿ ಬರುವವರೆಗೂ ನಾನು ಮಾತನಾಡುವುದಿಲ್ಲ ಎಂದರು.

Key words: H.Vishwanath-75th birthday –celebration-MLA-sara mahesh

ENGLISH SUMMARY…..

H. Vishwanath turns 75 tomorrow: Various programs in constituency – MLA Sa. Ra. Mahesh
Mysuru, May 7, 2022 (www.justkannada.in): “MLC H. Vishwanath turns 75 on May 8. Hence, we will celebrate his birthday in our constituency by organizing several programs on May 8, 9, and 10. I will lead the celebrations and organizing of the programs,” observed K.R. Nagara MLA Sa. Ra. Mahesh.
A lot of talk war had taken place between MLC H.Vishwanath and Sa. Ra. Mahesh after the collapse of the coalition government. A high dram was also witnessed atop the Chamundi hills over vowing in the name of the goddess. However, now Sa. Ra. Mahesh has surprised many by announcing that he would be organizing several programs in the constituency on the occasion of H. Vishwanath’s birthday.allegations-illegal-recruitment-mymul-high-court-stay-sa-ra-mahesh
Addressing a press meet in Mysuru today, Sa. Ra. Mahesh said that both politics and personal life are different. “Nowadays political matters have turned into personal allegations, which I and H. Vishwanath have also done in Mysuru in a big way. But he is a senior politician from our constituency. He has completed 75 years of his life in public life. Hence, I will lead his birthday celebration programs. I have to take part in the programs as the MLA of the constituency. Elections and personal matters are also different,” he observed.
The list of programs includes a musical program, procession, the inauguration of a pure drinking water unit, etc. A grand function will be held on Sunday, which will be graced by Adichunchanagiri Nirmalananda Swamiji, Sri Shivarathri Deshikendra Swamiji of Suttur Srimath, Kanakauru Peetha Niranjanandapuri Swamiji, Fr. J. Joseph, Jamia Masjid Ali Hassan Himam and seers of various other maths.
Keywords: Sa. Ra. Mahesh/ H. Vishwanath/ 75th birthday/ programs