ಮೈಸೂರು,ಜನವರಿ,7,2026 (www.justkannada.in): ಪ್ರಪಂಚಕ್ಕೆ ಮಾನವೀಯ ಮೌಲ್ಯಗಳನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋದಂತ ಸಂಸ್ಕೃತಿ ಇದ್ದರೆ ಅದು ಶರಣ ಸಂಸ್ಕೃತಿಯಾಗಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ್ ಜನ್ನಿ ತಿಳಿಸಿದರು.
ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317ಜಿ ಪ್ರಾಂತ್ಯ 4ರ ವತಿಯಿಂದ ನಗರದ ಬಿಲ್ಡರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಂತೀಯ ಸಮ್ಮೇಳನದ ಅತಿಥಿ ಭಾಷಣ ಮಾಡಿ ಮಾತನಾಡಿದರು. ಬಸವಣ್ಣ ಬ್ರಾಹ್ಮಣರಾಗಿ ಮಾದರ ಚೆನ್ನಯ್ಯನ ಮಗನಾಗಿ ಜನಸಿಬೇಕೆಂದು ಬಯಸಿದರು. ಹೀಗೆ ಶರಣರ ಸಂಸ್ಕೃತಿಯಲ್ಲಿ ಎಲ್ಲವೂ ಅಡಕವಾಗಿತ್ತು. ಆದರೆ, ಇಂದಿನ ಯುವಕರ ನಡೆ- ನುಡಿಗಳನ್ನು ನೋಡುತ್ತಿದ್ದರೆ ಆತಂಕವಾಗುತ್ತಿದೆ ಕಾರಣ ಎಂದರು.
ಸಂವಿಧಾನದ ಎಲ್ಲಾ ಸವಲತ್ತು ಜನರಿಗೆ ಸಿಕ್ಕಾಗ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಸಂವಿಧಾನದ ದ್ಯೇಯ ಸಮಪಾಲು ಸಮಬಾಳು ಎಂಬುದು ಬಿಟ್ಟರೆ ಬೇರೆನೂ ಇಲ್ಲವಾಗಿದೆ. ನಮ್ಮೆಲ್ಲರಿಗೂ ಮಾನವೀಯತೆ ಮೊದಲ ಆದ್ಯತೆ ಆಗಬೇಕಿದೆ. ಆಗ ಮಾತ್ರವೇ ಕುವೆಂಪು ಅವರ ವಿಶ್ವಮಾನವ ತತ್ವ ಜಾರಿಯಾಗಲಿದೆ ಎಂದರು.
ಸಮಾಜದ ಶುದ್ಧೀಕರಣದ ಜತೆಗೆ ಪ್ರಗತಿಪರ ಕೆಲಸ ಆಗಬೇಕಿದೆ. ಮಾನವೀಯ ಮೌಲ್ಯಗಳ ಉಳಿವಿಗೆ ಎನೆಲ್ಲಾ ಮಾಡಬೇಕೋ ಅದನ್ನು ಸಂಘಟನೆ ಮೂಲಕ ಮಾಡಿ ಅನುಷ್ಠಾನಕ್ಕೆ ಲಯನ್ಸ್ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಸಾಧಕರಾದ ವೀಣಾ ಆಶೋಕ್, ಅಂತರಾಷ್ಟ್ರೀಯ ಯೋಗ ಪಟು ಖುಷಿ ರನ್ನು ಸನ್ಮಾನಿಸಲಾಯಿತು. ಇದೇ ವೇಳೆ 40 ಕ್ಕೂ ಹೆಚ್ಚು ಮಂದಿ ವಿಕಲಚೇತನರಿಗೆ ಕೃತಕ ಯಂತ್ರೋಪಕರಣಗಳನ್ನು, 5 ಹೊಲಿಗೆ ಯಂತ್ರಗಳನ್ನು ಮತ್ತು ಸಂತೆ ಸರಗೂರು ಶಾಲೆಗೆ 50,000ಗಳನ್ನು ದೇಣಿಗೆ ನೀಡಲಾಯಿತು. ಪ್ರಾಂತ್ಯ 4ರ ಪ್ರಾಂತೀಯ ಅಧ್ಯಕ್ಷ ಲಯನ್ ಪಿ ಹೊನ್ನರಾಜು, ಜಿಲ್ಲಾ ರಾಜ್ಯಪಾಲರಾದ ಕೆ ಎಲ್ ರಾಜಶೇಖರ್, ಮಾಜಿ ಜಿಲ್ಲಾ ರಾಜ್ಯಪಾಲರಾದ ಎಂ.ಎಸ್.ಜೈಪ್ರಕಾಶ್, ಸಮ್ಮೇಳನ ಅಧ್ಯಕ್ಷರಾದ ಜಯಕುಮಾರ್, ಲಯನ್ ಸದಸ್ಯರುಗಳಾದ ಎಂ.ವಿ.ನಂದೀಶ್, ಶಿವಣ್ಣ, ಟಿ.ವಿ.ಸೋಮಪ್ರಭು, ಸಿ.ಮೋಹನ್ ಕುಮಾರ್, ಲಯನ್ ಡಿ.ಪಿ.ಪ್ರಕಾಶ್, ಲಯನ್ ಸೋಮು, ಲಯನ್ ಶ್ರೀ ಶಂಕರ್, ಲಯನ್ ಕೆ.ವಿ.ರಾಮಕೃಷ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಲಯನ್ ಜೆ.ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.
Key words: Sharan, literary, culture, H. Janardhan







