ನಿಖಿಲ್ ಕುಮಾರಸ್ವಾಮಿ ಮದುವೆನೂ ಈಗ ರಾಜಕೀಯ ವಿವಾದಕ್ಕೆ ದಾಳವಾಯ್ತು..

 

ಮೈಸೂರು, ಮಾ.07, 2020 : (www.justkannada.in news ) ಆರ್ಥಿಕ ಹಿಂಜರಿತದಲ್ಲಿ ನಿಖಿಲ್ ಕುಮಾರಸ್ವಾಮಿ ಅದ್ದೂರಿ ಮದುವೆ ವಿಚಾರ. ವಿಶ್ವನಾಥ್ ಹೇಳಿಕೆ ತೀರುಗೇಟು ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ.

ಮೈಸೂರಿನಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಎಚ್ಡಿಕೆ ಹೇಳಿದಿಷ್ಟು…

ನನ್ನ ಕುಟುಂಬದಲ್ಲಿ ನಾನು ಮದುವೆ ಮಾಡಿದ್ರೆ ಇವರಿಗ್ಯಾಕೆ ಚಿಂತೆ. ಇವರು ಚುನಾವಣೆಗೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ರಲ್ಲ. ಆರ್ಥಿಕ ಹಿಂಜರಿತದಂತಹ ಪರಿಸ್ಥಿತಿಯಲ್ಲಿ ಇದು ಬೇಕಿತ್ತಾ. ಅದು ಯಾರಪ್ಪನ ಮನೆ ದುಡ್ಡು. ಯಾರು ಅದಕ್ಕೆ ಬಂಡವಾಳ ಹಾಕಿದ್ರು..?
ಒಂದೊಂದು ಕ್ಷೇತ್ರಕ್ಕೆ 60 ಕೋಟಿ, 100 ಕೋಟಿ ಖರ್ಚು ಮಾಡಿದ್ರಲ್ಲ. ಆ ದುಡ್ಡು ಖರ್ಚು ಮಾಡುವಾಗ ಜನರ ಪರಿಸ್ಥಿತಿ ಅರಿವಾಗಲಿಲ್ವ..? ಈ ವಿಚಾರದಲ್ಲಿ ಅವರಿಂದ ನಾನು ಹೇಳಿಸಿಕೊಳ್ಳಬೇಕಾ.
ಈ ರಾಜ್ಯದಲ್ಲಿ ನನ್ನ ಕುಟುಂಬ ಹಾಗೂ ನಮ್ಮನ್ನು ಬೆಳಸಿದವರಿಗೆ ಹಾಗೂ ಅಭಿಮಾನಿ, ಹಿತೈಷಿಗಳಿಗೆ ಆಹ್ವಾನ ಕೊಡೋದು ಒಂದು ದೊಡ್ಡ ಕಾರ್ಯಕ್ರಮ‌ನಾ..? ಅದು ದುಂದುವೆಚ್ಚನಾ? ಮೈಸೂರಿನಲ್ಲಿ ವಿಶ್ವನಾಥ್ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ಕಿಡಿ.

key words : h.d.kumaraswamy-ex-cm-karnataka-mysore-nikhil-marriage-vishwanath