ಮೈಸೂರು, ಆಗಸ್ಟ್,7,2025 (www.justkannada.in): ಒಕ್ಕಲಿಗರ ವಿರುದ್ಧ ಜಿ.ವಿ.ಸೀತಾರಾಮ್ ಅವರಿಂದ ಅವಹೇಳನಕಾರಿ ಹೇಳಿಕೆ ಖಂಡಿಸಿ ಹೆಚ್.ಡಿ.ಕೋಟೆ, ಸರಗೂರು ತಾಲೂಕುಗಳು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ.
ಇಂದು ಹೆಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ಬಂದ್ ಮಾಡಲಾಗಿದ್ದು ಒಕ್ಕಲಿಗ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಪರಮಾಪ್ತ ಹಾಗೂ ಬೋವಿ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಜಿ.ವಿ.ಸೀತಾರಾಮ್ ಒಕ್ಕಲಿಗರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಜಿ.ವಿ.ಸೀತಾರಾಮ್ ವಿರುದ್ದ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು ಎಫ್‌ಐ ಆರ್ ದಾಖಲಾದ ಬಳಿಕ ಸೀತಾರಾಮ್ ನಾಪತ್ತೆಯಾಗಿದ್ದಾರೆ. ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಎರಡೂ ತಾಲೂಕಿನ ಹಳ್ಳಿಗಳಲ್ಲಿ ಆಟೋ, ಜೀಪ್ ಗಳ ಮೂಲಕ ಅನೌನ್ಸ್ ಮಾಡಿ ಬಂದ್ ಮಾಡಲಾಗಿದೆ. ಜಿ.ವಿ.ಸೀತಾರಾಮ್ ರನ್ನು ಗಡಿಪಾರು ಮಾಡುವಂತೆ ಒಕ್ಕಲಿಗ ಮುಖಂಡರು ಆಗ್ರಹಿಸಿದ್ದಾರೆ.
Key words: H.D. Kote, Saraguru, bandh, condemn, statement, Vokkaliga