ಬೆಂಗಳೂರು ಗ್ರಾಮಾಂತರ ಜನವರಿ,22,2026 (www.justkannada.in): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಕ/ಯುವತಿಯರಿಗೆ ಜಿಮ್ ಫಿಟ್ನೆಸ್ ತರಬೇತಿ ಶಿಬಿರ ಅರ್ಜಿ ಆಹ್ವಾನಿಸಿದೆ.
ಯುವಜನರನ್ನು ಸ್ವಾವಲಂಭಿಯಾಗಲು ಉತ್ತೇಜಿಸುವ ದೃಷ್ಟಿಯಿಂದ ಯುವಜನರಿಗೆ ತರಬೇತಿ ಶಿಬಿರವನ್ನು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ ಪಾಸಾಗಿರುವ 18 ರಿಂದ 40ವರ್ಷ ವಯೋಮಿತಿ ಹೊಂದಿರುವವರಿಗೆ ದಿನಾಂಕ 01-02-2026 ರಿಂದ 17-03-2026ರವರೆಗೆ 45 ದಿನಗಳ ಕಾಲ ತರಬೇತಿ ಆಯೋಜಿಸಲಾಗಿದೆ.
ದಿನಾಂಕ 28.01.2026 ರ ಒಳಗಾಗಿ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಸಹಾಯಕ ನಿರ್ದೇಶಕ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಭವನ, 1ನೇ ಮಹಡಿ, ಕೊಠಡಿ ಸಂ: 112 ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ಇಲ್ಲಿಗೆ ಸಲ್ಲಿಸಬೇಕು.
ತರಬೇತಿಯನ್ನು ಕರ್ನಾಟಕದ ಯುವಕ/ ಯುವತಿಯರಿಗೆ ಮಾತ್ರ ನೀಡಲಾಗುವುದು. ಯುವಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಆರ್.ಡಿ. ಸಂಖ್ಯೆಯಿರುವ ಜಾತಿ ಪ್ರಮಾಣ ಪತ್ರ ಲಗತ್ತಿಸಿರಬೇಕು. ಅರ್ಜಿದಾರರ ಹೆಸರು ಹಾಗೂ ಭಾವಚಿತ್ರವುಳ್ಳ ಆಧಾರ್ ಪತ್ರವನ್ನು ಲಗತ್ತಿಸುವುದು. ಕನಿಷ್ಠ ವಿದ್ಯಾರ್ಹತೆ ಎಸ್.ಎಸ್. ಎಲ್.ಸಿ (ಪಾಸ್) ಶಿಕ್ಷಣ ಹೊಂದಿರಬೇಕು. ಈ ತರಬೇತಿ ಶಿಬಿರವು 45 ದಿನಗಳ ಕಾಲ ನಡೆಯುತ್ತದೆ.. ತರಬೇತಿಯು ಬೆಳಿಗ್ಗೆ 10-00 ರಿಂದ ಸಂಜೆ 5-30 ಗಂಟೆಯುವರೆಗೆ ನಡೆಯುತ್ತದೆ. ಅರ್ಜಿದಾರರು 18 ರಿಂದ 40 ವರ್ಷದೊಳಗಿನ ಯುವಕ/ಯುವತಿಯರು ಮಾತ್ರ ಭಾಗವಹಿಸಲು ಅರ್ಹರು. ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳು ಶಿಸ್ತು ಹಾಗೂ ಸಂಯಮದಿಂದ ಇರಬೇಕು.
ಅನುಚಿತವಾಗಿ ವರ್ತಿಸಿದಲ್ಲಿ ಇಲಾಖೆಯ ನಿಯಾಮಾನುಸಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಅರ್ಜಿದಾರರ ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಉಪ/ಸಹಾಯಕ ನಿರ್ದೇಶಕರಿಂದ ದೃಢೀಕರಿಸಿ ಸಲ್ಲಿಸಬೇಕು. ತರಬೇತಿ ಶಿಬಿರದಲ್ಲಿ ಭಾಗವಹಿಸುವ ಯುವ ಜನರಿಗೆ ಲಘು ಉಪಹಾರ ಒದಗಿಸಲಾಗುವುದು. ಹೊರ ಜಿಲ್ಲೆಗಳಿಂದ ಆಗಮಿಸುವ ಶಿಬಿರಾರ್ಥಿಗಳಿಗೆ ಸಾಮಾನ್ಯ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.. ಅರ್ಜಿದಾರರು ದೈಹಿಕವಾಗಿ ಸದೃಢರಾಗಿರಬೇಕು.
ಹೆಚ್ಚಿನ ವಿವರಗಳನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಛೇರಿಯ ಸಹಾಯಕರು / ಕಛೇರಿ ದೂರವಾಣಿ ಸಂಖ್ಯೆ 9632778567 & 080-29787443 ನಲ್ಲಿಸಂಪರ್ಕಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: Applications, invited, gym fitness training camp







