ಗುಜರಾತ್ ಮಾಡಲ್ ವಿಶ್ವಕ್ಕೆ ಮಾದರಿ- ಸಚಿವ ಪ್ರಭು ಚೌವ್ಹಾಣ್.

ಬೀದರ್‌,ಡಿಸೆಂಬರ್,9,2022(www.justkannada.in):  ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಗುಜರಾತ್ ಮಹಾಜನತೆಗೆ ಅಭಿನಂದನೆಗಳು. ಗುಜರಾತ್ ಮಾಡಲ್ ವಿಶ್ವಕ್ಕೆ ಮಾದರಿ ಎಂದು ಪಶು ಸಂಗೋಪನೆ ಸಚಿವ ಪ್ರಭು. ಚವ್ಹಾಣ್‌ ತಿಳಿಸಿದ್ದಾರೆ.

ಔರದ್ ನಲ್ಲಿ ಇಂದು ಮಾತನಾಡಿದ ಸಚಿವ ಪ್ರಭು ಚೌವ್ಹಾಣ್,  ರಾಷ್ಟ್ರೀಯ, ರಾಜ್ಯ ನಾಯಕರ ಶ್ರಮದಿಂದ ಗುಜರಾತ್ ನಲ್ಲಿ ಗೆಲುವು ಸಾಧಿಸಿದ್ದೇವೆ.  , ಡಬಲ್‌  ಇಂಜಿನ್‌ ಸರಕಾರಕ್ಕೆ ಮನ್ನಣೆ ದೊರೆತಿದೆ. 2023ರ ರಾಜ್ಯ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ . ರಾಜ್ಯದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ 2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿಪರ ಮತ್ತು ಜನಸ್ನೇಹಿ ನಡೆಗಳಿಂದ ಗುಜರಾತ್‌ ನಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಉತ್ತಮ ಆಡಳಿತ ನೀಡುತ್ತಿದ್ದು, ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಜಯ ಸಾಧಿಸಲಿದೆ ಎಂದರು.

Key words: Gujarat-election-won-bjp- Minister- Prabhu Chauhan