ಗ್ಯಾರಂಟಿಗಳಿಂದ ಸಂಕಷ್ಟ: ಸಾರಿಗೆ ನೌಕರರಿಗೆ ಸಂಬಳ ಕೊಡುತ್ತಿಲ್ಲ- ಬಿವೈ ವಿಜಯೇಂದ್ರ ಟೀಕೆ

ಬೆಳಗಾವಿ,ಡಿಸೆಂಬರ್,18,2025 (www.justkannada.in): ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ಗ್ಯಾರಂಟಿಗಳಿಂದ ಸಾರಿಗೆ ಇಲಾಖೆಗೆ ಸಂಕಷ್ಟ ಉಂಟಾಗಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ವೈ ವಿಜಯೇಂದ್ರ, ಗೃಹ ಲಕ್ಷಿ ಯೋಜನೆ ಚುನಾವಣಾ ಲಕ್ಷ್ಮೀ ಆಗಿದೆ.  ಸಚಿವರು ಸದನಕ್ಕೆ ತಪ್ಪುಮಾಹಿತಿ ನೀಡಿದ್ದಾರೆ.  ಗ್ಯಾರಂಟಿಗಳಿಂದ ಸಾರಿಗೆ ಇಲಾಖೆ ಸಹ ಸಂಕಷ್ಟಕ್ಕೆ ಸಿಲುಕಿದೆ.  ಗ್ಯಾರಂಟಿ ಗಳಿಂದ ಸಾರಿಗೆ ಇಲಾಖೆಯಲ್ಲಿ ನೌಕರರಿಗೆ ಸಂಬಳ ಕೊಡುತ್ತಿಲ್ಲ.

ರಾಜ್ಯ ಸರ್ಕಾರದ ಬಂಡವಾಳ ಬಯಲಾಗಿದೆ ಸ್ವತಃ  ಸಿದ್ದರಾಮಯ್ಯನವರೇ ಗೊಂದಲದಲ್ಲಿದ್ದಾರೆ. ಇನ್ನೂ ಎಷ್ಟು ದಿನ ಸಿಎಂ ಆಗಿರುತ್ತೀನಿ ಎಂಬ ಗೊಂದಲದಲ್ಲಿದ್ದಾರೆ ಎಂದು  ಬಿವೈ ವಿಜಯೇಂದ್ರ ಲೇವಡಿ ಮಾಡಿದರು.

Key words: guarantees, Transport, BY Vijayendra, criticizes