ಜಿ.ಟಿ ದೇವೇಗೌಡ ಮೂರು ಬಾರಿ ಗೆದ್ದು ಏನು ಕಡಿದು ಕಟ್ಟಿ ಹಾಕಿದ್ದಾನೆ ಹೇಳಲಿ-ಸಿಎಂ ಸಿದ್ದರಾಮಯ್ಯ ವಾಗ್ದಾಳಿ.

ಮೈಸೂರು,ಏಪ್ರಿಲ್,3,2024 (www.justkannada.in): ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡ ಮೂರು ಬಾರಿ ಎಂಎಲ್ಎ ಆಗಿದ್ದಾನೆ. ಮೂರು ಬಾರಿ ಗೆದ್ದು ಏನು ಕಡಿದು ಕಟ್ಟಿ ಹಾಕಿದ್ದಾನೆ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಲೀಡ್ ಪಡೆಯಲು  ಸಿಎಂ ಸಿದ್ದರಾಮಯ್ಯ ಕ್ಷೇತ್ರದ ಮುಖಂಡರ ಸಭೆ ನಡೆಸಿದರು. ಕಳೆದ ಎರಡು ಬಾರಿ ಕೂಡ ಬಿಜೆಪಿ ಜೊತೆ ಹೊಂದಾಣಿಕೆ ಜಿಟಿ ದೇವೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದರು.  ಆ ಮೂಲಕ ಬಿಜೆಪಿಗೆ ಹೆಚ್ಚು ಮತ ಕೊಡಿಸುವಲ್ಲಿ ಸಫಲ ಆಗಿದ್ದರು. ಈ ಬಾರಿ ಜಿ.ಟಿ.ಡಿಗೆ ಟಕ್ಕರ್ ಕೊಡಲು ಸಿಎಂ ಸಿದ್ದರಾಮಯ್ಯ ಮುಖಂಡರ ಸಭೆ ನಡೆಸಿದ್ದು,  ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಲೀಡ್ ಕೊಡಲೆಬೇಕು ಎಂದು ಸೂಚನೆ ನೀಡಿದ್ದಾರೆ. ಕ್ಷೇತ್ರದ ಜೆ.ಡಿ.ಎಸ್ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ ಬಗ್ಗೆಯು ಚರ್ಚೆ ನಡೆಸಿದ್ದು ಆ ಮೂಲಕ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ಶಕ್ತಿ ಕುಂದಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಸಭೆಯಲ್ಲ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಸಭೆ ಕರೆದಿರೋದು ಲೋಕಸಭೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಹೆಚ್ಚಿನ ಮತ ನೀಡಲಿ ಎಂದು. ಹಿಂದಿನ ಚುನಾವಣೆಯಲ್ಲಿ ಆಗಿರೋದರ ಬಗ್ಗೆ ಚರ್ಚೆ ಮಾಡೋ ಅಗತ್ಯ ಇಲ್ಲ. ನಾನು ಈ ಬಾರಿ ಒಕ್ಕಲಿಗರನ್ನೇ ಕ್ಯಾಂಡಿಡೇಟ್ ಮಾಡಬೇಕೆಂದು ತೀರ್ಮಾನ ಮಾಡಿದೆ. ಈ ಚುನಾವಣೆ ನಮಗೆ ಒಂದು ಸವಾಲು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ದುರ್ಬಲ ಅಲ್ಲ. ಈ ಹಿಂದೆ ನಮಗೆ ಸೋಲಾಗಿದ್ರೆ ಅದು ನಮ್ಮ ತಪ್ಪಿನಿಂದ ಹೊರೆತು ಜನ ತಿರಸ್ಕಾರ ಮಾಡಿದ್ದಾರೆ ಅನ್ನೋದು ಸರಿಯಲ್ಲ. ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡ ಮೂರು ಬಾರಿ ಎಂಎಲ್ಎ ಆಗಿದ್ದಾನೆ. ಹುಣಸೂರಿನಲ್ಲಿ ಸೋತಿದ್ದ ಆಮೇಲೆ ಸತ್ಯನಾರಾಯಣ, ನನ್ನ ಮೇಲೆ, ಸಿದ್ದೇಗೌಡ ಮೇಲೆ ಒಮ್ಮೆ ಇಲ್ಲಿ ಗೆದ್ದಿದ್ದಾನೆ. ಮೂರು ಬಾರಿ ಗೆದ್ದು ಏನು ಕಡಿದು ಕಟ್ಟಿ ಹಾಕಿದಾನೆ ಹೇಳಲಿ ಎಂದು ಹೇಳಿದ್ದಾರೆ.

ಕಳೆದ ಬಾರಿ ಮೈತ್ರಿಯಾಗಿದ್ದ ವೇಳೆ ಒಬ್ಬರು ನಮಗೆ ಓಟ್ ಹಾಕಲಿಲ್ಲ, ಜೆಡಿಎಸ್ ನವರು ಬಿಜೆಗೆ ಮತ ಹಾಕಿದರು. ಜೆಡಿಎಸ್ ನವರು ಬಿಜೆಗೆ ವೋಟ್ ಹಾಕಿದಕ್ಕೆ ಬಿಜೆಪಿ ಅಭ್ಯರ್ಥಿ ಗೆದ್ದರು. 2018ರಲ್ಲಿ ನನ್ನ ಸೋಲಿಸಲಿಕ್ಕೆ ನಮ್ಮವರೇ ಹೆಚ್ಚಾದರು. ನಾನ್ ಕೆಲಸ ಮಾಡಿದರೂ ಯಾವುದೊ ಕಾರಣಕ್ಕೋ ಯಾವುದೊ ದ್ವೇಷಕ್ಕೋ ನನ್ನನ್ನ ಸೋಲಿಸಿದ್ರು. ಇಷ್ಟೆಲ್ಲಾ ಅಭಿವೃದ್ಧಿ ಮಾಡಿ ಸೋಲಾಯಿತಲ್ಲ ಅನ್ನೋ ನೋವಿದೆ. ಚಾಮುಂಡೇಶ್ವರಿ ಕ್ಷೇತ್ರದ ಜನ ಮನಸ್ಸು ಮಾಡಿದ್ರೆ ಬಿಜೆಪಿ ಸೋಲಿಸೋದು ಕಷ್ಟ ಏನಿಲ್ಲ. ನೀವು ಮನಸ್ಸು ಮಾಡಿದ್ರೆ ನನಗೆ ಮರ್ಯಾದೆ ಬರುತ್ತೆ. ನೀವೆಲ್ಲರೂ ಮನಸ್ಸು ಮಾಡಬೇಕು ನಮ್ಮ ಅಭ್ಯರ್ಥಿ ಗೆಲ್ಲಬೇಕು ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

Key words: GT Deve Gowda, CM Siddaramaiah, mysore