ಬೆಂಗಳೂರು ಆ.೨೭,೨೦೨೫: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA-Greater Bengaluru Authority) ರಚನೆಗೆ ರಾಜ್ಯ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದ್ದು, ಸೆಪ್ಟೆಂಬರ್ 2 ರಿಂದ ಅಸ್ತಿತ್ವಕ್ಕೆ ಬರಲಿದೆ. ಅಧಿಸೂಚನೆ ಅನ್ವಯ GBA 75 ಸದಸ್ಯರನ್ನು ಹೊಂದಿರುತ್ತದೆ. ಮುಖ್ಯಮಂತ್ರಿ ಅಧ್ಯಕ್ಷರಾದರೆ, ಉಪ ಮುಖ್ಯ ಮಂತ್ರಿ ಉಪಾಧ್ಯಕ್ಷರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಶೋಭಾ ಕರಂದ್ಲಾಜೆ ಅವರು ಜಿಬಿಎ ಪದನಿಮಿತ್ತ ಸದಸ್ಯರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಸೆಪ್ಟೆಂಬರ್ 2 ರಿಂದ ಅಸ್ತಿತ್ವ ಕಳೆದುಕೊಳ್ಳಲಿದೆ. ಅಧಿಸೂಚನೆ ಪ್ರಕಾರ, ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರಿರುತ್ತಾರೆ.
ಡಾ. ಯತೀಂದ್ರಗೆ ಸ್ಥಾನ:
ಬಿಬಿಎಂಪಿ ಮುಖ್ಯ ಆಯುಕ್ತರು GBA ಮುಖ್ಯ ಆಯುಕ್ತರು. ಸಚಿವರಾದ ಆರ್.ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ಬಿ.ಜೆ.ಜಮೀರ್ ಅಹಮದ್ ಖಾನ್, ಬೈರತಿ ಸುರೇಶ್ ಸೇರಿದಂತೆ ಬೆಂಗಳೂರು ನಗರ ಪ್ರತಿನಿಧಿಸುವ ನಾಲ್ವರು ಲೋಕಸಭಾ ಸದಸ್ಯರು, ಕರ್ನಾಟಕ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್, ಜಯರಾಂ ರಮೇಶ್ ಸೇರಿದಂತೆ ಐವರು ರಾಜ್ಯಸಭಾ ಸದಸ್ಯರು ಮತ್ತು 11 ಮಂದಿ ವಿಧಾನಪರಿಷತ್ ಸದಸ್ಯರು ಜಿಬಿಎನಲ್ಲಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಇದಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರು, ನಗರ ಭೂ ಸಾರಿಗೆ ನಿರ್ದೇಶಕರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಿರ್ದೇಶಕರು, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ, ಬೆಂಗಳೂರು ನೀರು ಸರಬರಾಜು ಮಂಡಳಿಯ ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮಂಡಳಿಯ ಅಧ್ಯಕ್ಷರು ಮತ್ತು ಐದು ಪಾಲಿಕೆಗಳ ಆಯುಕ್ತರು, ಉಪ ಆಯುಕ್ತರು, ನಗರ ಯೋಜನೆ ಮುಖ್ಯಸ್ಥರು ಮತ್ತು ಮುಖ್ಯ ಅಭಿಯಂತರರು ಕೂಡಾ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪದನಿಮಿತ್ತ ಸದಸ್ಯರಾಗಿದ್ದಾರೆ.
ಈ ಪಾಲಿಕೆಗಳಿಗೆ ಚುನಾವಣೆ ನಡೆದು ಮೇಯರ್‌ಗಳು ಆಯ್ಕೆಯಾದ ನಂತರ ಅವರನ್ನೂ ಜಿಬಿಎಗೆ ಪದನಿಮಿತ್ತ ಸದಸ್ಯರನ್ನಾಗಿ ಸೇರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. GBA ತಂಡದ ಘೋಷಣೆಯೊಂದಿಗೆ, ಸೆಪ್ಟೆಂಬರ್ 10, 2020 ರಿಂದ ಚುನಾಯಿತ ಸಂಸ್ಥೆಯಿಲ್ಲದ ಬೆಂಗಳೂರಿಗೆ ಬಹು ನಿರೀಕ್ಷಿತ ಚುನಾವಣೆಗೆ ಸರ್ಕಾರ ಸಜ್ಜಾಗಿದೆ.
key words: Dr. Yatindra Siddaramaiah, new responsibility, Greater Bengaluru Authority
SUMMARY:
Dr. Yatindra Siddaramaiah gets a new responsibility in Greater Bengaluru Authority.
The Chief Commissioner of BBMP is the Chief Commissioner of GBA. Ministers R. Ramalinga Reddy, Krishna Byre Gowda, K.J. George, B.J. Zameer Ahmed Khan, Bairati Suresh, four Lok Sabha members representing Bangalore city, five Rajya Sabha members including Nirmala Sitharaman, Jayaram Ramesh representing Karnataka and 11 Legislative Council members will be in GBA. CM Siddaramaiah’s son Dr. Yatindra Siddaramaiah has been appointed as a member.