ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ : 5 ಪಾಲಿಕೆಗಳಿಗೆ ನೂತನ ಕಮಿಷನರ್‌ ಗಳ ನೇಮಕ

ಬೆಂಗಳೂರು,ಸೆಪ್ಟಂಬರ್,2,2025 (www.justkannada.in): ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ನಗರ ಪಾಲಿಕೆ ಆಯುಕ್ತರಾಗಿ ಐಎಎಸ್ ಅಧಿಕಾರಿ ರಾಜೇಂದ್ರ ಚೋಳನ್ ನೇಮಕ ಮಾಡಲಾಗಿದೆ. ಪೂರ್ವ ನಗರ ಪಾಲಿಕೆ ಆಯುಕ್ತರಾಗಿ ರಮೇಶ್ ಜಿ ಎಸ್, ಪೂರ್ವ ಅಪರ ಆಯುಕ್ತೆಯಾಗಿ ಸ್ನೇಹಲ್ ಸುಧಾಕರ್ , ಉತ್ತರ ನಗರ ಪಾಲಿಕೆ ಆಯುಕ್ತೆಯಾಗಿ ಪೊಮ್ಮಳ ಸುನೀಲ್ ಕುಮಾರ್, ದಕ್ಷಿಣ ನಗರ ಪಾಲಿಕೆ ಆಯುಕ್ತರಾಗಿ ರಮೇಶ್.ಕೆ ಎನ್, ದಕ್ಷಿಣ ಪಾಲಿಕೆ ಅಪರ ಆಯುಕ್ತರಾಗಿ ಪಾಂಡುರಾಹುಲ್ ತುಕಾರಾಮ್, ಪಶ್ಚಿಮ ನಗರ ಪಾಲಿಕೆ ಆಯುಕ್ತರಾಗಿ ರಾಜೇಂದ್ರ ಕೆ.ವಿ ನೇಮಕ ಮಾಡಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಉಪಾಧ್ಯಕ್ಷರಾಗಿ ಡಿಸಿಎಂ ಡಿಕೆ ಶಿವಕುಮಾರ್  ಇದ್ದಾರೆ. ಸದಸ್ಯರ ಪಟ್ಟಿಯಲ್ಲಿ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯನವರ ಹೆಸರು ಇದೆ.

Key words: Greater Bangalore Authority, new commissioners, Corporation