ಬೆಂಗಳೂರು,ಆಗಸ್ಟ್,19,2025 (www.justkannada.in): ವಿಧಾನಸಭೆಯಲ್ಲಿ 2025 ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಗಿದೆ.
ವಿಧಾನಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ ಮಂಡಿಸಿದರು. ಈ ಕುರಿತು ಚರ್ಚೆ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಗ್ರೇಟರ್ ಬೆಂಗಳೂರು ಎಂಬ ಹೆಸರಿಗೆ ವಿರೋಧ ವ್ಯಕ್ತಪಡಿಸಿದರು. ಕನ್ನಡ ನಿಘಂಟಿನಲ್ಲಿ ನಿಮಗೆ ಬೇರೆ ಹೆಸರು ಸಿಗಲಿಲ್ವಾ..? ಎಂದು ಕಿಡಿಕಾರಿ ಗ್ರೇಟರ್ ಬದಲು ಕನ್ನಡದ ಹೆಸರಿಸುವಂತೆ ಅಶೋಕ್ ಒತ್ತಾಯಿಸಿದರು. ಅಲ್ಲದೆ ಇದು ಗ್ರೇಟರ್ ಬೆಂಗಳೂರು ಅಲ್ಲ, ವಾಟರ್ ಬೆಂಗಳೂರು ಆಗಿದೆ ಎಂದು ಟೀಕಿಸಿದರು.
ಸ್ಪೀಕರ್ ಯುಟಿ ಖಾದರ್ 2025 ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದರು. ಗ್ರೇಟರ್ ಬೆಂಗಳೂರು ವಿಧೇಯಕವು ಬಿಬಿಎಂಪಿಯನ್ನು ಐದು ಪಾಲಿಕೆಗಳಾಗಿ ವಿಭಜಿಸುವ ಮತ್ತು ವಾರ್ಡ್‌ಗಳ ಮರುವಿಂಗಡಣೆಯನ್ನು ಒಳಗೊಂಡಿದೆ.
Key words: ‘Greater Bangalore, Administration Amendment, Bill’ passed , Assembly