ಕೇಂದ್ರದಿಂದ ಅನ್ಯಾಯ: ನಮ್ಮ ಜನರ ಋಣ ತೀರಿಸಲು ಹೋರಾಟ-ಡಿಸಿಎಂ ಡಿ.ಕೆ ಶಿವಕುಮಾರ್.

ನವದೆಹಲಿ,ಫೆಬ್ರವರಿ,7,2024(www.justkannada.in):  ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಹೀಗಾಗಿ ನಮ್ಮ ಜನರ ಋಣ ತೀರಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಕೇಂದ್ರದ ಅನುದಾನ ಹಂಚಿಕೆ ತಾರತಮ್ಯ ಖಂಡಿಸಿ ನವದೆಹಲಿಯ ಜಂತರ್ ಮಂತರ್ ನಲ್ಲಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಕೇಂದ್ರ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ. ಬಿಜೆಪಿ ಸಂಸದರು ಪ್ರತಿಭಟನೆ ಮಾಡಲಿಲ್ಲ. ನಮ್ಮ ಜನರ ಋಣ ತೀರಿಸಲು ಹೋರಾಟ  ಮಾಡುತ್ತಿದ್ದೇವೆ ಎಂದರು.

ಈ ಹಿಂದೆ ಪರಿಹಾರ ಕೇಳಿದಾಗಲೂ ಕೊಡಲಿಲ್ಲ. ಅನುದಾನ ಯಾಕೆ ಕೊಡುತ್ತಿಲ್ಲ ಎಂದು  ಟೀಕೆ ಟಿಪ್ಪಣಿ ಮಾಡುವವರು ಉತ್ತರಿಸಲಿ. ಬಿಜೆಪಿ ಸಂಸದರು ಈ ಬಗ್ಗೆ ಧ್ವನಿ ಎತ್ತಲೇ ಇಲ್ಲ ಎಂದು ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ಗುಜರಾತ್ ರಾಜ್ಯಕ್ಕೆ ಎಷ್ಟು ಅನುದಾನ ಹೋಗಿದೆ ಅನ್ನೋದು ಕರ್ನಾಟಕ ಸರ್ಕಾರದ ಪ್ರಶ್ನೆಯಲ್ಲ, ಅದರೆ ಅನುದಾನವನ್ನು ಅಂಕಿ-ಅಂಶಗಳ ಆಧಾರದ ಮೇಲೆ ಸಮಾನವಾಗಿ ಹಂಚಲಿ, ಗುಜರಾತಿಗೆ ನೀಡಿದಷ್ಟು ಅನುದಾನವನ್ನು ಕರ್ನಾಟಕಕ್ಕೆ ನೀಡಿದರೆ, ಅದನ್ನು ಆ ರಾಜ್ಯಕ್ಕಿಂತ ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ, ಹೆಚ್ಚಿನ ಅಭಿವೃದ್ಧಿ ಸಾಧಿಸಿ ತೋರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: grant-Injustice –Centre- protest-DCM- DK Shivakumar