ಗ್ರಾಮ ಗ್ರಾಮದಲ್ಲೂ ‘ಕಮಲ’ ಅರಳಬೇಕು – ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಕರೆ…

ಉಡುಪಿ, ನವೆಂಬರ್,27,2020(www.justkannada.in)  ರಾಷ್ಟ್ರೀಯ ಮಟ್ಟದಲ್ಲಿ ಸರಿಸಾಟಿ ಇಲ್ಲದ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯು, ಇನ್ನೂ ಪಂಚಾಯಿತಿ ಮಟ್ಟದಲ್ಲೂ ಬಲಿಷ್ಠವಾಗಿ ಬೆಳೆಯಬೇಕು ಹಾಗೂ ಗ್ರಾಮ ಗ್ರಾಮದಲ್ಲೂ ಕಮಲ ಅರಳಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಶುಕ್ರವಾರದಂದು ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷವೂ ಗ್ರಾಮೀಣ ಪ್ರದೇಶದ ಪ್ರತಿಹಳ್ಳಿಗೂ ವಿಸ್ತರಿಸಬೇಕು. ಎಲ್ಲೆಲ್ಲೂ ಪಕ್ಷದ ಚುನಾಯಿತ ಪ್ರತಿನಿಧಿಗಳು ಇರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.I didn't knew CM BSY will think so cheaply - KPCC President D.K. Shivakumar

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಹತ್ತು ಹಲವು ಸುಧಾರಣೆಗಳ ಮೂಲಕ ಜನರಿಗೆ ಅನುಕೂಲವಾದ ಕಾರ್ಯಗಳನ್ನು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಕುಡಿಯುವ ನೀರು ಮುಂತಾದ ಮೂಲಸೌಕರ್ಯಗಳಿಗೆ ಅಪಾರ ಅನುದಾನ ಒದಗಿಸಲಾಗಿದೆ ಎಂದು ಅವರು ನುಡಿದರು.

ಗ್ರಾಮ ಸ್ವರಾಜ್ಯ ಎಂದರೆ ಗ್ರಾಮ ಮಟ್ಟದಲ್ಲಿಯೇ ಅತ್ಯುತ್ತಮ ಆಡಳಿತ ವ್ಯವಸ್ಥೆಯನ್ನು ಕಲಿಸುವುದು ಎಂದರ್ಥ. ಈಗಲೂ ರಾಜ್ಯದಲ್ಲಿ ಬಯಲು ಬಹಿರ್ದೆಸೆ ಜೀವಂತವಾಗಿದೆ. ಅದನ್ನು ನಿವಾರಿಸಬೇಕಾಗಿದೆ. ಪ್ರತಿಯೊಬ್ಬರ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪ್ರಧಾನಿಯವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ಇನ್ನಷ್ಟು ಜನಪರವಾಗಿಸಬೇಕು. ಹಳ್ಳಿಮಟ್ಟದ ಯಾವುದೇ ಅಭಿವೃದ್ಧಿ ಕೆಲಸಕ್ಕೂ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದತ್ತ ನೋಡುವಂಥ ಪರಿಸ್ಥಿತಿ ಇರಬಾರದು. ಆ ನಿಟ್ಟಿನಲ್ಲಿ ಕೆಲಸ ಮಾಡಲು ಬಿಜೆಪಿ ಸಿದ್ಧವಾಗಿದೆ. ಈ ಉದ್ದೇಶಗಳ ಸಾಕಾರಕ್ಕಾಗಿ ಪಕ್ಷವು ಎಲ್ಲ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಬೇಕಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದರು.grama panchayath-bjp- win-udupi-DCM-Ashwath narayan

ಪಂಚಾಯಿತಿ ಚುನಾವಣೆಯಲ್ಲಿ ಪ್ರತಿಯೊಬ್ಬರು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಪಕ್ಷದ ಹಿತಿದೃಷ್ಟಿಯಿಂದ ವರ್ತಿಸಬೇಕು. ಹೆಚ್ಚುಹೆಚ್ಚಾಗಿ ಜನಸಂಪರ್ಕವನ್ನು ಬೆಳೆಸಿಕೊಳ್ಳಬೇಕು. ಗ್ರಾಮ ಮಟ್ಟದ ಘಟಕಗಳ ಬಲವರ್ಧನೆ ಮಾಡಬೇಕು ಎಂದು ಡಿಸಿಎಂ ಸಲಹೆ ಮಾಡಿದರು.

ವಿ.ಎಸ್. ಆಚಾರ್ಯರಿಗೆ ಗೌರವ…

ಸಭೆಗೂ ಮುನ್ನ ಪಕ್ಷದ ಹಿರಿಯ ಮುಖಂಡರು, ಮಾಜಿ ಸಚಿವರು ಆಗಿದ್ದ ಡಾ.ವಿ.ಎಸ್.‌ ಆಚಾರ್ಯ ಅವರ ಪ್ರತಿಮೆಗೆ ಡಾ.ಅಶ್ವತ್ಥನಾರಾಯಣ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ, ಶಾಸಕ ರಘುಪತಿ ಭಟ್‌  ಉಪಸ್ಥಿತರಿದ್ದರು.

english summary….

Lotus’ should bloom in every village-DCM Dr. C.N. Ashwathnarayan
Udupi, Nov. 27, 2020 (www.justkannada.in): “There is no other party in the country at the national-level that matches BJP. Lotus should bloom in every village. The party workers should work hard and ensure the party’s victory,” opined Deputy Chief Minister Dr. C.N. Ashwathnarayan.grama panchayath-bjp- win-udupi-DCM-Ashwath narayan
He participated in the Gram Swarajya programme organised by the Udupi District BJP Unit, held at Koteshwara in the background of the forthcoming Gram Panchayat elections. In his address, he said that the meaning of Gram Swarajya is ensuring good administration at the village level. But it is sad to know the existence of open defecation, which needs to be addressed furthermore. Villagers should not have to look at taluk, district, or state-level administration to get every small work done. BJP is committed to strengthening panchayat raj system,” he added.
keywords: BJP/Lotus/rural development/ gram swarajya

Key words: grama panchayath-bjp- win-udupi-DCM-Ashwath narayan