ದೇಶ, ನಾಡನ್ನು ಮುನ್ನಡೆಸಲು ವೈಜ್ಞಾನಿಕ ಮನೋಭಾವ, ವೈಚಾರಿಕ ತಿಳಿವಳಿಕೆಯ ಪದವೀಧರರನ್ನ ಸಜ್ಜುಗೊಳಿಸಿ- ಸಿಎಂ ಸಿದ್ಧರಾಮಯ್ಯ ಸೂಚನೆ.

ಬೆಂಗಳೂರು ಆಗಸ್ಟ್,21,2023(www.justkannada.in):  ವೈಜ್ಞಾನಿಕತೆ ಮತ್ತು ವೈಚಾರಿಕತೆ ಇಲ್ಲದೆ ತಲೆ ತುಂಬ ಕೇವಲ ಮೌಡ್ಯವನ್ನೇ ತುಂಬಿಕೊಂಡ ಪದವೀಧರರು ವಿಶ್ವ ವಿದ್ಯಾಲಯಗಳಿಂದ ಹೊರಗೆ ಬಂದರೆ ದೇಶಕ್ಕೆ, ನಾಡಿಗೆ ಮತ್ತು ಈ ಸಮಾಜಕ್ಕೆ ಏನು ಪ್ರಯೋಜನ ? ಆದ್ದರಿಂದ ವೈಜ್ಞಾನಿಕ ಮನೋಭಾವದ ಪದವೀಧರರನ್ನು ಸಜ್ಜುಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಲಪತಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿಗಳ  ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ಕಾರದ ವ್ಯಾಪ್ತಿಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ರೀತಿ ಪ್ರಶ್ನಿಸಿದರು.

ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಆರ್ಥಿಕವಾಗಿ ಮತ್ತು ನಾಗರಿಕವಾಗಿ ಮುನ್ನಡೆಸುವ ಪದವೀಧರರನ್ನು ವಿಶ್ವ ವಿದ್ಯಾಲಯಗಳು ಸಜ್ಜುಗೊಳಿಸಬೇಕು. ಅದನ್ನು ಬಿಟ್ಟು ಕೇವಲ ಮೌಢ್ಯಗಳನ್ನು ತುಂಬಿಕೊಂಡು ಹೊರಗೆ ಬಂದರೆ ಅದರಿಂದ ದೇಶಕ್ಕೂ ಉಪಯೋಗವಿಲ್ಲ. ನಾಡಿಗೂ ಪ್ರಯೋಜನವಿಲ್ಲ. ಪದವೀಧರರ ಭವಿಷ್ಯಕ್ಕೂ ಉಪಯೋಗವಿಲ್ಲ ಎಂದರು.

ಸಭೆಯ ಇತರೆ ಮುಖ್ಯಾಂಶಗಳು ಹೀಗಿದೆ.

1.ರಾಜ್ಯದ 32 ಸಾರ್ವಜನಿಕ ವಿವಿಗಳ ಉಪಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

  1. ಕರ್ನಾಟಕ ರಾಜ್ಯದ ನಿವ್ವಳ ನೋಂದಣಿ ಅನುಪಾತ (GER) 36%
  2. ರಾಷ್ಟ್ರೀಯ GER 27.4%
  3. 2030ರ ವೇಳೆಗೆ GER ಶೇ. 50ಕ್ಕೆ ಹೆಚ್ಚಿಸುವ ಗುರಿ ಇದೆ.
  4. ಪುರುಷರ GER- 34.8%
  5. ಮಹಿಳೆಯರು- 37.2%
  6. ಪರಿಶಿಷ್ಟ ಜಾತಿ- 25.6%
  7. ಪರಿಶಿಷ್ಟ ಪಂಗಡ- 23.4%
  8. ರಾಜ್ಯದ 32 ಸಾರ್ವಜನಿಕ ವಿವಿಗಳಲ್ಲಿ 1.31 ಲಕ್ಷ ವಿದ್ಯಾರ್ಥಿಗಳು

GER ಪ್ರಮಾಣ ಸರ್ಕಾರಿ ಕಾಲೇಜುಗಳಲ್ಲಿ ಎಷ್ಟು, ಖಾಸಗಿ ಕಾಲೇಜುಗಳಲ್ಲಿ ಎಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರದ್ದು ಎಷ್ಟು ಎಂದು ಮಾಹಿತಿ ಇಟ್ಟುಕೊಂಡಿರಬೇಕು.

ಯುಯುಸಿಎಂಎಸ್‌ ನಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ.

GER ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಾದ ಚಾಮರಾಜನಗರ, ಯಾದಗಿರಿ, ಹಾಸನ, ಕೊಪ್ಪಳ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಮತ್ತು ಸಂಶೋಧನೆಗಳನ್ನು ಹೆಚ್ಚಿಸುವಂತೆ  ಸಿಎಂ ಸಿದ್ಧರಾಮಯ್ಯ ಸೂಚಿಸಿದರು.

ರಾಜ್ಯದ ಅತ್ಯಂತ ಹಳೆಯ ಮತ್ತು ಮೊದಲ ವಿವಿ ಆಗಿರುವ ಮೈಸೂರು ವಿವಿಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಿದ್ದರಾಮಯ್ಯ ಸೂಚನೆ ನೀಡಿದರು.

Key words: graduates – scientific -attitude -intellectual knowledge – country-CM Siddaramaiah

ENGLISH SUMMARY..

We need graduates with scientific temperament and rational knowledge to lead the country and the State

What is the use if only superstitious minds come out of the universities: Chief Minister Siddaramaiah

Bangalore August 21: Chief Minister Siddaramaiah asked, what is the use of graduates filled with ignorance, who come out of universities, without scientific temperament and rational thinking. What use are they for the country and the State and the society and Therefore he instructed the Vice Chancellors of Universities to equip graduates with a scientific temperament.

He was speaking at the meeting which was held under his chairmanship today with the Vice Chancellors of Public Universities and Senior Officials of Higher Education Department in Conference hall, Vidhana Soudha.

Universities should equip graduates who will lead the country scientifically, intellectually, economically and in a civilized way. If they come out filled with ignorance, they will not be useful for the country nor the State nor will they be useful for their own future, he said.

Other highlights of the meeting:

1. Vice chancellors of 32 public universities of the state and senior officials of the higher education department participated in the meeting.

2. Karnataka State Gross Enrollment Ratio (GER) 36%

3. National GER 27.4%

4. The aim is to increase GER to 50% by 2030

5. Male GER- 34.8%

6. Female- 37.2%
7. Scheduled Caste- 25.6%
8. Scheduled Tribe- 23.4%

9. 1.31 lakh students in 32 universities of the state

As the GER ratio in Government Colleges, Private Colleges, Schedule Caste, Schedule tribes, minorities will be recorded in UUCMS, information should be should be kept ready.

The Chief Minister directed to step up necessary measures and researches to increase the enrollment ratio of students and improve the quality of education in districts like Chamarajanagar, Yadgiri, Hassan, Koppala, Kodagu etc. where GER rate is low. The Chief Minister instructed to improve the quality of education in Mysore University, which is the oldest and the first university in the state.