ಗ್ರಾ.ಪಂ ಚುನಾವಣೆ: ನಿವೃತ್ತ ನ್ಯಾಯಮೂರ್ತಿ ಸೊಸೆ ಗೆಲುವು…

ಮೈಸೂರು,ಡಿಸೆಂಬರ್,30,2020(www.justkannada.in):  ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಮಧ್ಯೆ ನಿವೃತ್ತ ನ್ಯಾಯಮೂರ್ತಿಯ ಸೊಸೆಯೊಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.GP election- Retired Justice – win-mysore

ಹೌದು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ದಿ. ಎನ್ ಎಸ್ ವೀರಭದ್ರಯ್ಯ ಅವರ  ಸೊಸೆ ರೇಷ್ಮಾ ಹರೀಶ್ ಅವರು ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ವಾರ್ಡ್ 3ರಲ್ಲಿ ಚುನಾವಣೆಗೆ ನಿಂತಿದ್ದರು. ಇಂದು ಫಲಿತಾಂಶ ಪ್ರಕಟಗೊಂಡಿದ್ದು,  ರೇಷ್ಮಾ ಹರೀಶ್ 316ಮತಗಳನ್ನು ಪಡೆದು  ಈ ಮೂಲಕ ಗೆಲುವು ದಾಖಲಿಸಿದ್ದಾರೆ.

Key words: GP election- Retired Justice – win-mysore