ಗ್ರಾ.ಪಂ ಚುನಾವಣೆ: ಸರಗೂರು ಮತ್ತು ಎಚ್ ಡಿ ಕೋಟೆ  ತಾಲ್ಲೂಕುಗಳಲ್ಲಿ ನೀರಸ ಮತದಾನ…

ಮೈಸೂರು,ಡಿಸೆಂಬರ್,22,2020(www.justkannada.in):  ರಾಜ್ಯದಲ್ಲಿ ಮೊದಲ ಹಂತದ ಗ್ರಾಮಪಂಚಾಯತ್ ಚುನಾವಣೆಗೆ ಮತದಾನ ನಡೆಯುತ್ತಿದ್ದು ಈ ನಡುವೆ ಮೈಸೂರು ಜಿಲ್ಲೆಯ ಸರಗೂರು, ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ಈವರೆಗೆ ನೀರಸ ಮತದಾನವಾಗಿದೆ.Teachers,solve,problems,Government,bound,Minister,R.Ashok

ಹೌದು ಮಧ್ಯಾಹ್ನ 11 ರ ವೇಳೆಗೆ ಸರಗೂರು ತಾಲ್ಲೂಕಿನಲ್ಲಿ ಶೇ 27.40 ಮತದಾನ. ಎಚ್ ಡಿ ಕೋಟೆ ತಾಲೂಕಿನಲ್ಲಿ ಶೇ 24 ರಷ್ಟು ಮತಹಕ್ಕು ಚಲಾವಣೆಯಾಗಿದೆ. ಇನ್ನು ಮಧ್ಯಾಹ್ನ ನಂತರ ಮತಷ್ಟು ಮತದಾನ ಚುರುಕುಗೊಳ್ಳುವ ಸಾಧ್ಯತೆ ಇದೆ.

ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳ ಒಟ್ಟು 39ಗ್ರಾಮ‌ ಪಂಚಾಯ್ತಿಗಳ 579 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಬಹತೇಕ ಎಲ್ಲಾ ಕಡೆ ಶಾಂತಿಯುತ ಮತದಾನ ನಡೆಯುತ್ತಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ 26ಗ್ರಾಮ ಪಂಚಾಯ್ತಿಗಳ 407 ಸದಸ್ಯರ ಸ್ಥಾನಗಳಿಗೆ 1106 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.GP election-mysore- Sarguru - HD kote- taluks-voting

ನೂತನವಾಗಿ ತಾಲ್ಲೂಕಾದ ಸರಗೂರು ತಾಲೂಕಿನ 13 ಗ್ರಾಮ ಪಂಚಾಯ್ತಿಗಳ 190 ಸದಸ್ಯರ ಸ್ಥಾನಗಳಿಗೆ 563ಮಂದಿ ಸದಸ್ಯರು. ಒಟ್ಟು ಎರಡು ತಾಲೂಕು ಗಳಿಂದ ಒಟ್ಟು 1669 ಮಂದಿ ಸದಸ್ಯರು ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇಂದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗುತ್ತಿದ್ದು, ಡಿಸೆಂಬರಬ 30 ರಂದು ಫಲಿತಾಂಶ ಹೊರಬೀಳಲಿದೆ.

Key words: GP election-mysore- Sarguru – HD kote- taluks-voting