ಕಾಂಗ್ರೆಸ್ ನವರಿಂದಲೇ ಸರ್ಕಾರ ಪತನ: ಮುಂದೆ ಹೆಚ್.ಡಿಕೆ ಸಿಎಂ ಆಗಲಿದ್ದಾರೆ- ಭವಿಷ್ಯ ನುಡಿದ ಶಾಸಕ ಜಿ.ಟಿ ದೇವೇಗೌಡ.

ಹುಬ್ಬಳ್ಳಿ,ಅಕ್ಟೋಬರ್,12,2023(www.justkannada.in):  ಕಾಂಗ್ರೆಸ್ ನವರಿಂದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದ್ದು ಮುಂದೆ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.

ಈ ಕುರಿತು ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಕಾಂಗ್ರೆಸ್ ನವರಿಂದಲೇ  ಸರ್ಕಾರ ಪತನವಾಗಲಿದೆ. ಮುಂದಿನ ದಿನಗಳಲ್ಲಿ  ಹೆಚ್.ಡಿ ಕುಮಾರಸ್ವಾಮಿ ನೂರಕ್ಕೆ ನೂರರಷ್ಟು ಸಿಎಂ ಆಗ್ತಾರೆ.

ಕಾಂಗ್ರೆಸ್ ಶಾಸಕರಾದ ಬಿಆರ್ ಪಾಟೀಲ್, ರಾಜುಕಾಗೆ, ಬಸವರಾಜರಾಯರೆಡ್ಡಿ  ಅವರು ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ ಹೀಗಾಗಿ ಕಾಂಗ್ರೆಸ್ ನವರೇ ಸರ್ಕಾರ ಬೀಳಿಸುತ್ತಾರೆ ಮುಂದಿನ ದಿನದಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗೇ ಆಗ್ತಾರೆ ಎಂದು ಜಿಟಿ ದೇವೇಗೌಡ ನುಡಿದರು.

Key words: Govt- fall – Congress –members-HDK- will-become-CM-MLA GT Deve Gowda