ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ: ಅಲ್ಪಸಂಖ್ಯಾತರನ್ನ ಒಲೈಸುವುದೇ ಅವರ ಕೆಲಸ-ಬಿವೈ ವಿಜಯೇಂದ್ರ.

ಬೆಳಗಾವಿ,ಡಿಸೆಂಬರ್,7,2023(www.justkannada.in): ರೈತರ ಬಗ್ಗೆ ಈ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಅಲ್ಪಸಂಖ್ಯಾತರನ್ನ ಒಲೈಸುವುದೇ ಅವರ ಕೆಲಸವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ.  ಬರೀ ಅಲ್ಪಸಂಖ್ಯಾತರನ್ನ ಓಲೈಸುವುದೇ ರಾಜ್ಯ ಸರ್ಕಾರದ ಕೆಲಸವಾಗಿದೆ. ಸದನದಲ್ಲಿ ಬರಪರಿಹಾರ ಕೈಗೊಂಢ ಬಗ್ಗೆ ಪ್ರಸ್ತಪ ಮಾಡಲಾಗಿದೆ.  ರಾಜ್ಯದಲ್ಲಿ ಈವರೆಗೂ 50 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ಯಾವುದೇ ಕ್ರಮವಿಲ್ಲ ಎಂದು ಕಿಡಿಕಾರಿದರು.

Key words: Govt -doesn’t- care -about -farmers-BY Vijayendra.