ಸರ್ಕಾರ 5 ವರ್ಷ ಕಲ್ಲುಬಂಡೆಯಂತೆ ಇರುತ್ತೆ: ಆಪರೇಷನ್ ಕಮಲದ ಹಗಲುಗನಸು ಕಾಣುವುದನ್ನ ಬಿಡಿ-ಸಚಿವ ಶಿವರಾಜ್ ತಂಗಡಗಿ.

ಕೊಪ್ಪಳ,ನವೆಂಬರ್, 1,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ 5 ವರ್ಷ ಕಲ್ಲುಬಂಡೆಯಂತೆ ಇರುತ್ತದೆ. ಹೀಗಾಗಿ ಶಾಸಕ ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಹಗಲುಗನಸು ಕಾಣುವುದನ್ನ ಬಿಡಬೇಕು ಎಂದು  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಟಾಂಗ್ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ರಮೇಶ್ ಜಾರಕಿಹೊಳಿ ಆಪರೇಷನ್ ಕಮಲದ ಬಗ್ಗೆ ಹಗಲು ಗನಸನ್ನು ಕಾಣುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ 5 ವರ್ಷ ಕಲ್ಲು ಬಂಡೆಯಂತೆ ಇರುತ್ತದೆ. ಬಿಜೆಪಿಯ ಕಮಲ ಮುದುಡಿ ಹೋಗಿದೆ ಎಂದು ಲೇವಡಿ ಮಾಡಿದರು.

ಬರ ಅಧ್ಯಯನ ಕುರಿತು ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ಈಗಾಗಲೇ ಕೇಂದ್ರ ಅಧ್ಯಯನ ತಂಡ ಬರ ವೀಕ್ಷಣೆ ಮಾಡಿದೆ. ಬಿಜೆಪಿ ನಾಯಕರು ಮೊದಲು ಬರಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡಲಿ. ರಾಜ್ಯದಲ್ಲಿ ಬರ ವಿಚಾರವಾಗಿ ಕೇಂದ್ರದಿಂದ ನಮಗೆ ಸಹಕಾರ ಸಿಗುತ್ತಿಲ್ಲ. ದೆಹಲಿಗೆ  ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಹೋದರೂ ಯಾವುದೇ ರೀತಿಯಾದ ಸಹಕಾರ ಸಿಗುತ್ತಿಲ್ಲ ಎಂದು ಕಿಡಿಕಾರಿದರು.

Key words: Govt – 5 years-Stop -daydreaming –Operation- Kamala-Minister- Shivaraj Tangadagi