ಬಳ್ಳಾರಿ ನೆಲದಲ್ಲಿ ನಿಂತು ಹೇಳ್ತಿದ್ದೇನೆ ಕಾಂಗ್ರೆಸ್ ಕೊನೇ ಸಿಎಂ ಸಿದ್ದರಾಮಯ್ಯ- ಗೋವಿಂದ ಕಾರಜೋಳ

ಬಳ್ಳಾರಿ,ಜನವರಿ,17,2026 (www.justkannada.in):  ಬಳ್ಳಾರಿ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ. ಕಾಂಗ್ರೆಸ್ ನಿಂದ ಕೊನೇ ಸಿಎಂ ಸಿದ್ದರಾಮಯ್ಯನವರಾಗುತ್ತಾರೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಸಿದ್ದರಾಮಯ್ಯ ಸರ್ಕಾರ ಅಭಿವೃದ್ದಿ ರಹಿತವಾದದು. ಅವರ ಆಡಳಿತಕ್ಕೆ ರಾಜ್ಯದ ಜನರು ರೋಸಿ ಹೋಗಿದ್ದಾರೆ. ಇವರ ಎರಡುವರೆ ವರ್ಷ ಪೂರೈಸಿದೆ. ಕಾಂಗ್ರೆಸ್ ಕೊನೇ ಸಿಎಂ ಸಿದ್ದರಾಮಯ್ಯನವರಾಗುತ್ತಾರೆ  ಬಳ್ಳಾರಿ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ. ಇದು ಭವಿಷ್ಯ ಅಲ್ಲ ಸತ್ಯ ಹೇಳುತ್ತಿದ್ದೇನೆ. ನಾನು ಶರಣರ ನಾಡಿನಿಂದ ಬಂದವನು ಎಂದರು.

ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಳ್ಳಾರಿಯಲ್ಲಿ ಗುಂಡಿನ ದಾಳಿಗೆ ಅಮಾಯಕನ ಬಲಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಬಳ್ಳಾರಿ ಶಾಸಕರನ್ನ ಬಂಧನ ಮಾಡಬೇಕಿತ್ತು. ಸರ್ಕಾರ ದುರಾಡಳಿತದಿಂದ ಅಮಾಯಕರ ಮೇಲೆ ಕೇಸ್ ಆಗಿದೆ.  ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಲು  50 ಲಕ್ಷ ರೂ ಬಾಂಡ್ ಕೇಳುತ್ತಾರೆ. ಬ್ರಿಟೀಷರ ವಿರುದ್ದ ಹೋರಾಟ ಮಾಡಿದಾಗಲೂ ಅಡ್ಡಿಪಡಿಸಲಿಲ್ಲ.  ದುರಾಡಳಿತದಿಂದ ಬ್ರಿಟೀಷರನ್ನು ದೇಶದ ಜನರು ಓಡಿಸಿದರು. ಈಗ ಸಿದ್ದರಾಮಯ್ಯರನ್ನ ಓಡಿಸುವ ಕಾಲ ಬಂದಿದೆ ಎಂದು ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

Key words:  Siddaramaiah, last, Congress, CM,  Govinda Karajola