ಮೀಸಲಾತಿ ಹೆಚ್ಚಳ ಸುಗ್ರಿವಾಜ್ಞೆಗೆ ರಾಜ್ಯಪಾಲರ ಅಂಕಿತ: ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಸಚಿವ ಶ್ರೀರಾಮುಲು.

ಬೆಂಗಳೂರು,ಅಕ್ಟೋಬರ್,24,2022(www.justkannada.in): ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ಸುಗ್ರಿವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆ ಈ ಸಂಬಂಧ ಕಾಂಗ್ರೆಸ್ ನಾಯಕರಿಗೆ ಸಾರಿಗೆ ಸಚಿವ ಶ್ರೀರಾಮುಲುಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಶ್ರೀರಾಮುಲು, ಅಹಿಂದ ಮುಖವಾಡ ಹಾಕಿಕೊಂಡವರಿಗೆ ಈಗ ತಕ್ಕ ಉತ್ತರ ಸಿಕ್ಕಿದೆ. ರಾಜಕಾರಣಕ್ಕಾಗಿ ಜನರನ್ನ ದಾರಿ ತಪ್ಪಿಸಬಾರದು. ಮೀಸಲಾತಿ ಹೆಚ್ಚಳ ಬಿಜೆಪಿಯಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ಗಾಗಿ ದಲಿತರನ್ನ ಬಳಸಿಕೊಂಡರು. ಜನರ ದಾರಿ ತಪ್ಪಿಸುವ ಕಾಂಗ್ರೆಸ್ ನಾಯಕರು ಈಗ ಏನಂತಾರೆ.  ರಾಜ್ಯಪಾಲರು ಅಂಕಿತ ಹಾಕಬೇಕು.  ಇದೆಲ್ಲಾ ಆಗಲ್ಲ ಅಂದ್ರು ಈಗ ಏನಂತಾರೆ ಎಂದು ಸಚಿವ ಶ್ರೀರಾಮುಲು ತಿರುಗೇಟು ನೀಡಿದರು.treat-rate-health-minister-sriramulu-warning-private-hospitals

Key words:  Governor’s- sign – increasing- reservation – Minister- Sriramulu-Congress.