Friday, September 18, 2026

BDA Apartments

ಸಿಎಂ ಜೊತೆ 136 ಶಾಸಕರು ಇದ್ದೇವೆ: ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗಲ್ಲ- ಸಚಿವ ...
Home Front Page ಸಿಎಂ ಜೊತೆ 136 ಶಾಸಕರು ಇದ್ದೇವೆ: ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗಲ್ಲ- ಸಚಿವ ಕೆಜೆ ಜಾರ್ಜ್

ಸಿಎಂ ಜೊತೆ 136 ಶಾಸಕರು ಇದ್ದೇವೆ: ಯಾವುದೇ ಕಾರಣಕ್ಕೂ ಸರ್ಕಾರ ಪತನವಾಗಲ್ಲ- ಸಚಿವ ಕೆಜೆ ಜಾರ್ಜ್

ಚಿಕ್ಕಬಳ್ಳಾಪುರ,ಆಗಸ್ಟ್,8,2024 (www.justkannada.in):  ಸಿಎಂ ಸಿದ್ದರಾಮಯ್ಯ ಜೊತೆ 136 ಶಾಸಕರು ಇದ್ದೇವೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಪತನವಾಗಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದ್ದು ಏನು ತಪ್ಪು ಇಲ್ಲ. ಸಿದ್ದರಾಮಯ್ಯ ಪಾತ್ರದ ಬಗ್ಗೆ ಇದುವರೆಗೂ ವಿಪಕ್ಷಗಳು ದಾಖಲೆಗಳನ್ನು ಕೊಟ್ಟಿಲ್ಲ. ಲಾಭವಾಗುತ್ತೆ ಅಂದರೆ ಎಚ್ ಡಿ ಕುಮಾರಸ್ವಾಮಿ ಯಾವುದೇ ಗೌಡರ ಜೊತೆಯು ಹೋಗುತ್ತಾರೆ. ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗಿಯಾಗಲ್ಲವೆಂದು ಹೇಳಿ ಈಗ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಬೀಳುತ್ತೆ ಅಂತ ಅಧಿಕಾರಿಗಳನ್ನು ಹೆದರಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಜೊತೆಗೆ ಕಾಂಗ್ರೆಸ್ಸಿನ 136 ಶಾಸಕರು ಇದ್ದೇವೆ. ಬಿಜೆಪಿಯವರಿಗೆ ಯಾವುದೇ ಮಾರ್ಗದಿಂದ ಆದರೂ ಅಧಿಕಾರ ಬೇಕಾಗಿದೆ. ಅಧಿಕಾರ ಬಿಟ್ಟು ಬಿಜೆಪಿ ಅವರಿಗೆ ಇರಲು ಸಾಧ್ಯವಾಗುತ್ತಿಲ್ಲ ಎಂದು ಕೆ.ಜೆ ಜಾರ್ಜ್ ಲೇವಡಿ ಮಾಡಿದರು.

Key words: Government, will not, fall, Minister, KJ George