ಸರ್ಕಾರ ಬೊಮ್ಮಾಯಿ ಕಂಟ್ರೋಲ್ ನಲ್ಲಿ ಇಲ್ಲ. ಆರ್ ಎಸ್ ಎಸ್ ನ ನಿಯಂತ್ರಣದಲ್ಲಿದೆ- ಪ್ರಿಯಾಂಕ್ ಖರ್ಗೆ

ಬೆಂಗಳೂರು,ನವೆಂಬರ್,5,2022(www.justkannada.in): ಸರ್ಕಾರ ಬೊಮ್ಮಾಯಿ ಕಂಟ್ರೋಲ್ ನಲ್ಲಿ ಇಲ್ಲ. ಎಲ್ಲವೂ ಆರ್ ಎಸ್ ಎಸ್ ನ ನಿಯಂತ್ರಣದಲ್ಲಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯ ಕ್ಯಾಬಿನೆಟ್  ಸಿಎಂ ಬೊಮ್ಮಾಯಿ ಕಂಟ್ರೋಲ್ ನಲ್ಲಿ ಇಲ್ಲ ಕೇಶವ ಕೃಪಾ ಕಂಟ್ರೋಲ್ ನಲ್ಲಿದೆ ಎಂದು ವ್ಯಂಗ್ಯವಾಡಿದರು.

ತುಮಕೂರಿನಲ್ಲಿ ತಾಯಿ ಮತ್ತು ಅವಳಿ ಮಕ್ಕಳು ಸಾವು ಪ್ರಕರಣ ಕುರಿತು ಸರ್ಕಾರದ ವಿರುದ್ಧ ಕಿಡಿಕಾರಿದ ಪ್ರಿಯಾಂಕ್ ಖರ್ಗೆ,  ಇದು ಸರ್ಕಾರಿ ಪ್ರಾಯೋಜಿತ ಕೊಲೆ. ಸರ್ಕಾರ ಮಾನವೀಯತೆ ಕಳೆದುಕೊಂಡಿದೆ. ದುಡ್ಡು ಕೊಟ್ಟರೇ ಮಾತ್ರ ಕೆಲಸ ಮಾಡುತ್ತಾರೆ   ಗರ್ಭಿಣಿ  ಬಳಿ ಹಣ ಕೇಳಿ ಹೊರ ಹಾಕಿದ್ದಾರೆ  ದುಟ್ಟುಕೊಟ್ಟು ಬರೋದ್ರಿಂದ ಇಂತಹ ಘಟನೆಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.

Key words:  government – not –CM- Bommai –contral-RSS-MLA-Priyank Kharge